ಕುರಿ ಪ್ರತಾಪ ಅನ್ನೋ ಹೆಸರಿನ ಕಾಮಿಡಿ ನಟ ಒಬ್ಬ ಇದ್ದಾನಲ್ಲಾ? ಒಂದು ಕಾಲದಲ್ಲಿ ʻಕುರಿಗಳು ಸಾರ್ ಕುರಿಗಳುʼ ಎನ್ನುವ ಪ್ರಾಂಕ್ ಶೋದಿಂದ ಸಿಕ್ಕಾಪಟ್ಟೆ ಫೇಮಸ್ಸಾಗಿದ್ದವನು ಈತ. ಆ ಕಾರ್ಯಕ್ರಮದ ಮೂಲಕವೇ ಒಂದಿಷ್ಟು ಮಂದಿ ಸಿನಿಮಾದವರನ್ನು ಪರಿಚಯ ಮಾಡಿಕೊಂಡು, ಛಾನ್ಸು ಗಿಟ್ಟಿಸಿಕೊಂಡ. ಅದೇ ಹೊತ್ತಿಗೆ ಸಾಧು ಕೋಕಿಲನ ಹಾವಳಿ ಮಿತಿ ಮೀರಿ ಹೋಗಿತ್ತು. ಸಿನಿಮಾವೊಂದರಲ್ಲಿ ನಟಿಸಲು ಈತ ಲಕ್ಷಾಂತರ ರುಪಾಯಿ ಪ್ಯಾಕೇಜ್ ಡೀಲ್ ಮಾಡುತ್ತಿದ್ದರು. ಕಾಸು ಕೊಟ್ಟರೂ ಕೈಗೆ ಸಿಗದೆ ಆಟವಾಡಿಸುತ್ತಿದ್ದರು. ಪೇಮೆಂಟು ಈಸಿಕೊಂಡು ಸೀದಾ ಗೋವಾ, ಮಲೇಶಿಯಾ ಮುಂತಾದ ಕಡೆಗೆ ರೈಟ್ ಅನ್ನುತ್ತಿದ್ದರು. ಅಲ್ಲಿ ಕೆಸಿನೋಗೆ ಹೋಗಿ ಜೂಜಾಡಿ, ಈಜಾಡಿ ಬರುತ್ತಿದ್ದರು. ಕೊಡೋ ಕಾಸು ಕೊಟ್ಟು ಸಾಧುಗಾಗಿ ನಿರ್ಮಾಪಕ ನಿರ್ದೇಶಕರು ಪರದಾಡಬೇಕಿತ್ತು. ಅಷ್ಟೊತ್ತಿಗೇ ಎದ್ದು ನಿಂತಿದ್ದ ಚಿಕ್ಕಣ್ಣ ಕೂಡಾ ಸಾಧುಕೋಕಿಲಾನನ್ನು ಮೀರಿಸುವಂತೆ ಚೇಷ್ಟೆ ಶುರು ಮಾಡಿದ್ದ. ಸಾಧು ಮಾಡಿಕೊಳ್ಳುತ್ತಿದ್ದ ಯಡವಟ್ಟು, ಚಿಕ್ಕಣ್ಣನ ದೌಲತ್ತು ಕುರಿ ಪ್ರತಾಪನಿಗೆ ವರವಾಯ್ತು. ಅವರಿಗೆ ಅಂತಾ ಸೃಷ್ಟಿಯಾದ ಪಾತ್ರಗಳು ಪ್ರತಾಪನಿಗೆ ಸಿಗಲು ಶುರುವಾಯ್ತು. ʻತಾನಿದ್ದರೇನೆ ಸಿನಿಮಾ ಓಡೋದುʼ ಅನ್ನೋ ಮಟ್ಟಕ್ಕೆ ಬಿಲ್ಡಪ್ ಕೊಡಲು ಶುರು ಮಾಡಿಬಿಟ್ಟ. ಒಪ್ಪಿಕೊಂಡ ಸಿನಿಮಾಗಳಿಗೆ ಕೈಕೊಟ್ಟು, ಹೇಳದೆ ಕೇಳದೆ ಅದ್ಯಾವುದೋ ಬಿಗ್ ಬಾಸ್ಗೆ ಹೋಗಿ ಕೂತುಬಿಟ್ಟಿದ್ದ ಈ ಕುರಿಬಾಂಡು.
ಒಂದಾನೊಂದು ಕಾಲದಲ್ಲಿ ಪ್ರಾಂಕ್ ಶೋಗಳಲ್ಲಿ ಕುರಿ ಪ್ರತಾಪನಿಗೆ ಅವಕಾಶ ಕೊಟ್ಟಿದ್ದು ಸ್ಮೈಲ್ ಸಾಗರ್. ಪ್ರಕಾಶ, ಸಾಗರ್, ರಂಗ, ಸುನಿಲ ಮುಂತಾದವರು ತಮ್ಮ ಹೆಸರಿನ ಹಿಂದೆ ಕುರಿ ಸೇರಿಸಿಕೊಂಡು ಇಂಡಸ್ಟ್ರಿಗೆ ಬರಲು ಕಾರಣವಾಗಿದ್ದೇ ಸಾಗರ್. ಕುರಿ ಪ್ರತಾಪ ಈ ಎಲ್ಲರಿಗೂ ಕೈಕೊಟ್ಟು, ಅವರಿಗೆ ಸಿಕ್ಕಿದ್ದ ಪಾತ್ರಗಳನ್ನೆಲ್ಲಾ ತಾನು ಬಾಚಿಕೊಂಡ ಅನ್ನೋ ಮಾತೂ ಇದೆ. ಅದೇನೇ ಇರಲಿ, ಇತ್ತೀಚೆಗೆ ಇವನ ಮೇಲೆ ಕಂಪ್ಲೇಂಟ್ ಜಾಸ್ತಿ ಕೇಳಿಬರುತ್ತಿದೆ.
ದುಡ್ಡಿಗಾಗಿ ವಿಪರೀತ ಡಿಮ್ಯಾಂಡು ಮಾಡುತ್ತಾನೆ. ನಟಿಸಿದ ಸಿನಿಮಾದ ಯಾವ ಪತ್ರಿಕಾಗೋಷ್ಟಿ, ಪಬ್ಲಿಸಿಟಿಗಳಲ್ಲಿ ಕಾಣಿಸಿಕೊಳ್ಳೋದಿಲ್ಲ. ತುಂಬಾ ಬ್ಯುಸಿ ಅಂತಾ ಹೇಳಿ ತಪ್ಪಿಸಿಕೊಳ್ಳುತ್ತಾನೆ.. ಎಂಬಿತ್ಯಾದಿ ಆರೋಪಗಳು ಕೇಳಿಬರುತ್ತಿವೆ. ಅಸಲಿಗೆ ಈತ ಯಾವ ಶೂಟಿಂಗಿಗೂ ಹೋಗೋದಿಲ್ಲ. ಅಲ್ಲೆಲ್ಲೋ ಲೇವಾದೇವಿ ಆಫೀಸಲ್ಲಿ ಕೂತು ಬಡ್ಡಿ ದುಡ್ಡು ಎಣಿಸುತ್ತಿರುತ್ತಾನೆ ಅನ್ನೋದು ವಾಸ್ತವ. ತೀರಾ ಇತ್ತೀಚೆಗೆ ಆರ್ ಸಿ ಬ್ರದರ್ಸ್ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ಪ್ರಚಾರದ ಕೊರತೆಯಿಂದ ಅಸುನೀಗಿತು. ಈ ಸಿನಿಮಾ ದುರಂತ ಅಂತ್ಯ ಕಾಣಲು ಇದೇ ಕುರಿ ಪ್ರತಾಪ ಬಹುಮುಖ್ಯ ಕಾರಣ ಅನ್ನೋದು ಈತನ ಮೇಲಿನ ಲೇಟೆಸ್ಟ್ ಆರೋಪ!
No Comment! Be the first one.