ಸ್ಯಾಂಡಲ್ ವುಡ್ ನಲ್ಲಿ ತಮ್ಮ ಡಿಫರೆಂಟ್ ಮ್ಯಾನರಿಸಂ ಮತ್ತು ಡ್ಯಾನ್ಸ್ ಮೂಲಕ ಹೆಸರು ಮಾಡಿದ ವರ್ಸಟೈಲ್ ನಟ ಲೂಸ್ ಮಾದ ಯೋಗಿ. ಪಕ್ಕಾ ಮಾಸ್ ಎಂಟರ್ ಟೈನ್ ಮೆಂಟ್ ಸಿನಿಮಾಗಳ ಮೂಲಕವೇ ಪಡ್ಡೆ ಹೈಕಳ ಹೃದಯ ಗೆದ್ದ ಅವರ ಬ್ಯಾಕ್ ಟು ಬ್ಯಾಕ್ ಚಿತ್ರಗಳು ರಿಲೀಸ್ ಆದರೂ ಅಷ್ಟೇನು ಯಶಸ್ಸು ತರುವಲ್ಲಿ ಕೆಲಸ ಮಾಡಲಿಲ್ಲ. ಆದರೆ ಮರಳಿ ಯತ್ನವ ಮಾಡಲು ರೆಡಿಯಾಗಿರುವ ಲೂಸ್ ಮಂದ ಕಂಸ ಮೂಲಕ ಕಮಾಲು ಮಾಡಲು ರೆಡಿಯಾಗಿದ್ದಾರೆ. ಇದರ ಜತೆಗೆ ಯೋಗಿ ಪ್ಯಾನ್ ಇಂಡಿಯಾ ರಿಲೀಸ್ ಆಗಲಿರುವ ಕಿತ್ನ ಎನ್ನುವ ಸಿನಿಮಾದಲ್ಲಿಯೂ ನಟಿಸುತ್ತಿರುವ ವಿಚಾರ ಈಗಷ್ಟೇ ಬೆಳಕಿಗೆ ಬಂದಿದೆ.
ಇತ್ತೀಚಿಗಂತೂ ಬಾಹುಬಲಿ, ಕೆಜಿಎಫ್ ಸಿನಿಮಾಗಳ ಬ್ಲಾಕ್ ಬಸ್ಟರ್ ಸಕ್ಸಸ್ ನ ನಂತರ ಸಾಕಷ್ಟು ನಿರ್ಮಾಪಕರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವ ಮನಸ್ಸು ಮಾಡಿದ್ದು, ಈಗಾಗಲೇ ಸಾಕಷ್ಟು ಸಿನಿಮಾಗಳು ಅನೌನ್ಸ್ ಕೂಡ ಆಗಿದೆ. ಈ ಮಧ್ಯೆ ಕಾಲಿವುಡ್ ಖ್ಯಾತ ನಿರ್ದೇಶಕ ಹಾಗೂ ಯಾರೆ ಕೂಗಾಡಲಿ ಎಂಬ ಕನ್ನಡದ ಸಿನಿಮಾವನ್ನು ನಿರ್ದೇಶಿಸಿದ್ದ ಸಮುದ್ರಕಣಿ ಐದು ಭಾಷೆಗಳಲ್ಲಿ ಚಿತ್ರವನ್ನ ನಿರ್ಮಿಸೋಕೆ ರೆಡಿಯಾಗಿದ್ದಾರೆ. ಅಲ್ಲದೇ ಈ ಹಿಂದೆ ಕೆಲಸ ಮಾಡಿದ್ದ ಕನ್ನಡದ ನಟ ಲೂಸ್ ಮಾದ ಯೋಗಿಗೆ ತಮ್ಮ ಚಿತ್ರದಲ್ಲಿ ಅವಕಾಶ ನೀಡುವ ಮನಸ್ಸು ಮಾಡಿದ್ದಾರೆ. ವರ್ಕಿಂಗ್ ಟೈಟಲ್ ಆಗಿ ಕಿತ್ನಾ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಸದ್ಯದಲ್ಲಿಯೇ ಈ ಚಿತ್ರದ ಕುರಿತು ಅಧಿಕೃತ ಮಾಹಿತಿಯೂ ಹೊರಬೀಳಲಿದೆ.