ದುನಿಯಾ ಚಿತ್ರದ ಲೂಸ್ ಮಾದ ಪಾತ್ರದಿಂದಲೇ ಭರಪೂರ ಅವಕಾಶಗಳನ್ನ ಗಿಟ್ಟಿಸಿಕೊಂಡು ನಾಯಕ ನಟನದಾತ ಯೋಗಿ. ಲೂಸ್ ಮಾದ ಅಂತಲೇ ಪ್ರಸಿದ್ಧಿ ಪಡೆದಿದ್ದ ಯೋಗಿಗೆ ಏಕ್ ಧಂ ಅದೃಷ್ಟು ಖುಲಾಯಿಸಿಕೊಂಡಿತ್ತು. ಆದರೀಗ ಯೋಗಿಯನ್ನ ಸರಣಿಸೋಲುಗಳು ಹೈರಾಣಾಗಿಸಿವೆ.ಇತ್ತೀಚೆಗಷ್ಟೇ ಲಂಬೋದರ ಅಂತೊಂದು ಸಿನಿಮಾದಲ್ಲಿ ಯೋಗಿ ನಾಯಕನಾಗಿದ್ದ. ರಿಪೋರ್ಟುಗಳು, ನೋಡಿದ ಮಂದಿ ಚಿತರ್ರ ಚೆನ್ನಾಗಿದೆ ಅಂದರೂ ಜನ ಮಾತ್ರ ಥೇಟರಿನತ್ತ ಮುಖ ಮಾಡಿರಲಿಲ್ಲ. ಇದೀಗ ಯೋಗಿ ಲಂಕೆ ಎಂಬ ಮತ್ತೊಂದು ಚಿತ್ರಕ್ಕೆ ನಾಯಕನಾಗಿರೋ ಸುದ್ದಿ ಬಂದಿದೆ.
ಈ ಹಿಂದೆ ಬಣ್ಣ ಬಣ್ಣದ ಲೋಕ ಎಂಬ ಸಿನಿಮಾ ನಿರ್ದೇಶನ ಮಾಡಿದ್ದವರು ರಾಮ್ ಪ್ರಸಾದ್. ಅವರೇ ಲಂಕೆಗೂ ಸಾರಥಿಯಾಗಿದ್ದಾರೆ. ಈ ಮೂಲಕ ಯೋಗಿಯನ್ನು ಬೇರೆಯದ್ದೇ ರೀತಿಯಲ್ಲಿ ತೋರಿಸುವಂಥಾ ವಿಶಿಷ್ಟ ಕಥೆಯನ್ನೂ ರೆಡಿ ಮಾಡಿಕೊಂಡಿದ್ದಾರಂತೆ. ಒಂದರ ಹಿಂದೊಂದರಂತೆ ಸೋಲು ಸುತ್ತಿಕೊಂಡು ಕಂಗಾಲಾಗಿರೋ ಯೋಗಿ ಕೂಡಾ ಲಂಕೆಯ ಮೂಲಕ ಮತ್ತೊಂದು ಗೆಲುವಿನ ಕಿಡಿ ಹೊತ್ತಿಕೊಳ್ಳುತ್ತೆ ಅಂತ ಕಾದು ಕೂತಿದ್ದಾನೆ.ಲೂಸ್ ಮಾದನ ಲಕ್ಕು ಲಂಕೆಯಲ್ಲಾದರೂ ಇರಬಹುದಾ ಅನ್ನೋ ಕುತೂಹಲ ಎಲ್ಲರಲ್ಲಿದೆ!
#