ಪೆಟ್ರೋಲ್ ಬೆಲೆಯೇರಿಕೆಯ ವಿರುದ್ಧ ಭಾರತ ಬಂದ್ ನಡೆದಿದೆ. ಈ ಸಂಬಂಧವಾಗಿ ಇಡೀ ಕರ್ನಾಟಕದಲ್ಲಿ ನಡೆದ ಒಂದಷ್ಟು ಲೈವ್ ಅಹಿತರ ಘಟನಾವಳಿಗಳೂ ನಡೆದಿವೆ. ಆದರೆ ಈ ಪೆಟ್ರೋಲ್ ಬೆಲೆಯೇರಿಕೆಯ ಬಗ್ಗೆ ಆನ್ಲೈನಿನಲ್ಲಿ ಮಾರಾಮಾರಿಯೇ ನಡೆಯುತ್ತಿದೆ. ಇದೇ ಬಿಸಿಯಲ್ಲೀಗ ನಟ, ನಿರ್ಮಾಪಕ, ರಾಜಕಾರಣಿ ಮದನ್ ಪಟೇಲ್ ಇದೀಗ ಮೋದಿ ಬೆಂಬಲಿಗರ ವಿರುದ್ಧ ಸಿಟ್ಟಾಗಿದ್ದಾರೆ. ಜೊತೆಗೊಂದು ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಒಂದು ಕಾಲದಲ್ಲಿ ಬಿಜೆಪಿ ಪಕ್ಷದಲ್ಲೇ ಓಡಾಡಿಕೊಂಡಿದ್ದ ಮದನ್ ಯಾಕೆ ಅದೇ ಪಕ್ಷದ ವಿರುದ್ಧ ಗುಡುಗಿದ್ದಾರೋ ಗೊತ್ತಿಲ್ಲ!
`ಇತ್ತೀಚೆಗೆ ನಾನು ಕೇಂದ್ರ ಸರ್ಕಾರದ ಪೆಟ್ರೋಲ್ ಬೆಲೆ ಏರಿಕೆ ಕುರಿತು ಶೇರ್ ಮಾಡುತ್ತಿರೋ ಪೋಸ್ಟ್ಗಳಿಗೆ ಕೆಲವು ನಮೋಭಕ್ತ ಶಿಖಂಡಿ ವಂಶಸ್ಥರು ತಮ್ಮ ಚೆಡ್ಡಿ ಭಾಷೆಯಲ್ಲಿ ಕಮೆಂಟ್ಸ್ ಮಾಡುತ್ತಿರುವ ಬಗ್ಗೆ ನನ್ನ ಪಿಎ ಗಮನಕ್ಕೆ ತಂದಿರುತ್ತಾನೆ. ನಿಮ್ಮ ಭಾಷೆ ನಿಮ್ಮತನ ತೋರಿಸುತ್ತದೆ. ನಿಮಗಿಂತಾ ಕೀಳು ಮಟ್ಟದ ಭಾಷೆ ನಮಗೂ ಬರುತ್ತದೆ. ನಿಮ್ಮ ಭಾಷೆಯ ಬಗ್ಗೆ ಹಿಡಿತವಿರಲಿ. ಇಲ್ಲದಿದ್ದಲ್ಲಿ ನೀವೇ ಅದಕ್ಕೆ ಹೊಣೆಗಾರರಾಗುತ್ತೀರಿ. ಕಾನೂನು ಕ್ರಮದ ಜೊತೆಗೆ ನನ್ನ ಅಭಿಮಾನಿಗಳ ಕ್ರಮದ ಬಗ್ಗೆ ಎಚ್ಚರವಿರಲಿ. ಧೈರ್ಯವಿದ್ದರೆ ನಿಮ್ಮ ನಿಮ್ಮ ವಿಳಾಸದ ಜೊತೆಗೆ ಕಮೆಂಟ್ ಮಾಡಿ ನೋಡಿ. ನಂತರ ಬೆಳವಣಿಗೆ ಗಮನಿಸಿ. ಹುಷಾರ್…’ ಎಂಬುದು ಫೇಸ್ಬುಕ್ ಮೂಲಕವೇ ಮದನ್ ಪಟೇಲ್ ಎಚ್ಚರಿಕೆ ನೀಡಿರೋದರ ಸಾರಾಂಶ.
ಇಂಥಾ ಚರ್ಚೆಗಳ ನಡುವೆ ವೀರಾವೇಷದ ಅಶ್ಲೀಲ ಪದ ಬಳಕೆ ಈಗ ಆನ್ಲೈನ್ ಜಗತ್ತಿನಲ್ಲಿ ಮಾಮೂಲಿಯಾಗಿದೆ. ಪಕ್ಷ ಯಾವುದೇ ಇದ್ದರೂ ಕೂಡಾ ವಿರೋಧ ವ್ಯಕ್ತ ಪಡಿಸೋದಕ್ಕೆ ಸಭ್ಯ ಮಾರ್ಗಗಳಿವೆ. ಇಂಥಾ ವೀರಾವೇಶದಿಂಣದಲೇ ರ್ಚೆಯನ್ನು ಹಾದಿ ತಪ್ಪಿಸುವ ಪ್ರಯತ್ನಗಳೂ ನಡೆಯೋದಿದೆ. ಆದರೆ ನೆಟ್ಟಗೆ ಕನ್ನಡವೂ ಬಾರದ ಮಂದಿ ಕೆಟ್ಟಾ ಕೊಳಕ ಬೈಗುಳ ಬಳಸುವ ಮೂಲಕ ಅವರವರ ಪಕ್ಷಕ್ಕೆ, ನಾಯಕರಿಗೂ ಅಪಮಾನವೆಸಗುತ್ತಿದ್ದಾರೆಂಬ ಅಭಿಪ್ರಾಯ ಪ್ರಜ್ಞಾವಂತರದ್ದು.
ಸದ್ಯ ಮದನ್ ಪಟೇಲ್ ಎಚ್ಚರಿಕೆ ಯಾವ ರೀತಿಯಲ್ಲಿ ವರ್ಕೌಟ್ ಆಗುತ್ತದೆ ಎಂಬುದನ್ನು ಕಾದು ನೋಡ ಬೇಕಿದೆ!
#