ರವೀಂದ್ರ ತುಂಬರಮನೆ-ರಮೇಶ್ ಬೇಗಾರ್ ಸೃಷ್ಟಿಸಿದ ಜಲಪಾತ ಕನ್ನಡಕ್ಕೊಂದು ಪರಿಸರ ಕಾಳಜಿ ಚಿತ್ರ, ರಿಂದ.
ನಟ ಪ್ರಮೋದ್ ಶೆಟ್ಟಿ ಅವರಿಗಾಗಿ ವೈಶಂಪಾಯನ ತೀರ ಚಿತ್ರವನ್ನು ನಿರ್ದೇಶಿಸಿದ್ದ ರಮೇಶ್ ಬೇಗಾರ್ ಸದ್ಯ ʻಜಲಪಾತʼವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತಿನ ಎಲೆಕ್ಟ್ರಾನಿಕ್ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚಿದ್ದು ಈ ಒತ್ತಡಕ್ಕೆ ಪರಿಹಾರ ನಿಸರ್ಗದಲ್ಲಿ ಮಾತ್ರ ಸಾಧ್ಯ. ಪ್ರಕೃತಿ, ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದ ಕುರಿತಾದ ಜಲಪಾತದಲ್ಲಿದೆ. ೪೦ ವರ್ಷಗಳ ಹಿಂದೆ ಭಾರತದ ಆಹಾರ ಪದ್ದತಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಆರೋಗ್ಯಕರವಾಗಿತ್ತು, ಆದ್ರೆ ಈಗ ಮಣ್ಣಿನಲ್ಲಿ ಸತ್ವ ಇಲ್ಲ, ಆಹಾರದಲ್ಲಿ ಕಲಬೆರಕೆ ಹಾಗೂ ರಾಸಾಯನಿಕ ವಸ್ತುಗಳ ವಿಪರೀತ ಬಳಕೆಯಿಂದ ಜನರಲ್ಲಿ ಸಮಸ್ಯೆಗಳು ಹೆಚ್ಚಿವೆ. ಹೀಗಾಗಿ ಪೂರ್ವಿಕರ ಜೀವನ ಶೈಲಿ ಹಾಗೂ ಆಹಾರ ಪದ್ದತಿ ಮತ್ತೆ ಮರುಕಳಿಸಬೇಕು ಅನ್ನೋ ಕಾರಣಕ್ಕೆ ಜಲಪಾತ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಾಮಾಜಿಕ ಚಿಂತಕ ಹಾಗೂ 150ಕ್ಕೂ ಹೆಚ್ಚು ಆರ್ಗ್ಯಾನಿಕ್ ಪ್ರಾಡೆಕ್ಟ್ ಇರುವ ಇಂಡಸ್ ಹರ್ಬ್ಸ್ ಎಂ.ಡಿ ರವೀಂದ್ರ ತುಂಬರಮನೆ”.
ಜಲಪಾತ ಚಿತ್ರದಲ್ಲಿ ರಜನೀಶ್ ನಾಯಕರಾಗಿ ನಟಿಸಿದರೆ, ನಾಗಶ್ರೀ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.
ನೈಸರ್ಗಿಕ ಹಾಗೂ ಸಾವಯವ ಕೃಷಿ ಕಮ್ಯೂನಿಟಿ ಕಲ್ಪನೆಯ ರುವಾರಿಯೂ ಆಗಿರುವ ರವೀಂದ್ರ ತುಂಬರಮನೆ ಅವರು ಮೊನ್ನೆಯಷ್ಟೇ ಬೆಂಗಳೂರಿನಿಂದ ೯೦ ಕಿ.ಲೋ ಮೀಟರ್ ದೂರದಲ್ಲಿರೋ ಮದ್ದೂರಿನ “ಮಧುವನ”ದಲ್ಲಿ ವಸಂತೋತ್ಸವ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಇದಕ್ಕಾಗಿ ಯುಗಾದಿ ಹಾಗೂ ಸುಗ್ಗಿ ಹಬ್ಬದಂತೆ ವಾತಾರಣವನ್ನು ಕ್ರಿಯೇಟ್ ಮಾಡಿದ್ದರು. ಈ ಜಾಗದಲ್ಲಿಯೇ ಜಲಪಾತ ಸಿನಿಮಾದ ಸೀಕ್ವೆನ್ಸ್ ಕೂಡಾ ಚಿತ್ರೀಕರಣ ಮಾಡಲಾಯ್ತು. ಬೆಂಗಳೂರಿನ ಟೆನ್ಷನ್ ಹಾಗೂ ಬ್ಯುಸೀ ಬದುಕಿನ ಜಂಜಾಟದಲ್ಲಿದ್ದ ನೂರಾರು ಜನ ಮಧುವನಕ್ಕೆ ಭೇಟಿಕೊಟ್ಟು ಸಂಗೀತ ಹಾಗೂ ಪಾರಂಪರಿಕ ಆಟಗಳನ್ನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಶೃಂಗೇರಿ ಸುತ್ತಮುತ್ತ ೧೮ ದಿನಗಳ ಕಾಲ ಶೂಟಿಂಗ್ ನಡೆದಿದ್ದು ಸದ್ಯ ಮಧುವನದ ವಸಂತೋತ್ಸವದಲ್ಲಿ ಚಿತ್ರೀಕರಣ ನಡೆಯುತ್ತಿದೆ. ನೈಸರ್ಗಿಕ ಹಾಗೂ ಸಾವಯವ ಕೃಷಿ ಬಗ್ಗೆ ಆಸಕ್ತಿ ಇರುವವರು ಮಧುವನಕ್ಕೆ ವಿಸಿಟ್ ಕೊಟ್ಟು ಸೇರ್ಪಡೆ ಕೂಡ ಆಗಬಹುದು ಎಂದಿದ್ದಾರೆ. ಜಲಪಾತ ಸಿನಿಮಾಕ್ಕೆ ಸಬ್ಜೆಕ್ಟ್ ಒದಗಿಸಿದವರು ಹಾಗೂ ಮಧುವನ ಕಲ್ಪನೆಯ ಕತೃ “ರವೀಂದ ತುಂಬರಮನೆ”.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 7337898907
No Comment! Be the first one.