ಜೀವನವನ್ನೇ ಆಟವನ್ನಾಗಿಸಿಕೊಳ್ಳುವ ಯುವಕರ ದುರಂತಮಯ ಚಿತ್ರಣ ಮನರೂಪ ಚಿತ್ರದಲ್ಲಿದೆ

ಬೆಂಗಳೂರು, ಮಾರ್ಚ್ ೧೯, ೨೦೨೦: ಬಹುತೇಕ ಸಿನಿ ಪ್ರೇಮಿಗಳಿಗೆ ಮನರೂಪ ಸಿನಿಮಾವೊಂದು ಚಿತ್ರಮಂದಿರಕ್ಕೆ ಬಂದಿದ್ದೇ ಗೊತ್ತಾಗಿರಲಿಲ್ಲ. ಹೊಸ ಬಗೆಯ ನಿರೂಪಣೆ ಮತ್ತು ವಿಕ್ಷೀಪ್ತ ಮನೋಭಾವವನ್ನು ಅನಾವಣಗೊಳಿಸುವ ಮನರೂಪ ಕಾಡಿನಲ್ಲೇ ಚಿತ್ರೀಕರಣಗೊಂಡ ಚಿತ್ರ. ಹೊಸ ತಲೆಮಾರಿನ ಒಂದು ವರ್ಗದ ಯುವಕರ ವಿಭಿನ್ನ ಆಸಕ್ತಿಯನ್ನು ವಿವರಿಸುವ ಡಾರ್ಕ್ ಪರಿಕಲ್ಪನೆ ಹೊಂದಿರುವ ಸೈಕಲಾಜಿಕಲ್ ಥ್ರಿಲ್ಲರ್ ಕನ್ನಡ ಸಿನಿಮಾ ಇದಾಗಿದ್ದು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಗೆ ಒಳಪಟ್ಟಿತ್ತು. ನಿಧಾನವಾಗಿ ಪ್ರಾರಂಭವಾಗುವ ಮನರೂಪ ನಿರೂಪಣೆ ಹಂತ ಹಂತವಾಗಿ ಪ್ರೇಕ್ಷಕರನ್ನು ಥ್ರಿಲ್ ಮಾಡುತ್ತದೆ. ಆದರೆ ಚಿತ್ರಮಂದಿರಕ್ಕೆ ಬಂದು ಮನರೂಪವನ್ನು ಪ್ರೇಕ್ಷಕರು ನೋಡಿರಲಿಲ್ಲ.

ಆದರೆ ಈಗ ಮನರೂಪ ಅಮೆಜಾನ್ ಪ್ರೈಮ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದಂತೆ, ಅನೇಕರು ಈ ಚಿತ್ರವನ್ನು ನೋಡಿ ವಿಭಿನ್ನ ಕಥಾಹಂದರದ ಸಿನಿಮಾ ಇದಾಗಿದೆ ಎನ್ನುತ್ತಿದ್ದಾರೆ. ಎಲ್ಲೂ ಕಥೆಯ ಜಾಡನ್ನು ಬಿಡದೇ ನಿರೂಪಣೆಗೊಂಡ ಚಿತ್ರ ಮತ್ತು ಹೊಸ ತಂಡ ಮಾಡಿದ್ದಾರೆ ಎಂದು ಅನಿಸದಂತೆ ಮ್ಯಾಚ್ಯುರ್ಡ್ ಆಗಿ ಅಭಿನಯಿಸಿದ್ದಾರೆ ಎಂಬಂತಹ ಕಾಮೆಂಟ್‌ಗಳು ಬರುತ್ತಿವೆ. ಸೋಷಿಯಲ್ ಮಿಡಿಯಾದಲ್ಲಿ ಮನರೂಪ ಪೋಸ್ಟರ್‌ಗಳನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ. ಥೀಯೆಟರ್‌ನಲ್ಲಿ ಸಿಗದ ಮಾನ್ಯತೆ, ಅಮೆಜಾನ್ ಪ್ರೈಮ್‌ನಲ್ಲಿ ಸಿಗುತ್ತಿರುವುದಕ್ಕೆ ಮನರೂಪ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಕಿರಣ್ ಹೆಗಡೆ ಥ್ರಿಲ್ ಆಗಿದ್ದಾರೆ.

ನಾನೇ ಬಂಡವಾಳ ಹೂಡಿ ಮನರೂಪ ಮಾಡಿದೆ. ಆದರೆ ಚಿತ್ರಮಂದಿರದ ಮೂಲಕ ಜನರಿಗೆ ತಲುಪಿಸುವಲ್ಲಿ ಬಹುಶ: ನಮ್ಮ ಚಿತ್ರತಂಡ ಸೋತಿತು. ಮುಖ್ಯವಾಗಿ, ಮನರೂಪ ಖಾಸಗಿಯಾಗಿ ಕೂತು ನೋಡಲು ಹೆಚ್ಚು ಆಪ್ತವಾದ ಸಿನಿಮಾ ಎಂದು ಈಗ ನನಗೆ ಅನಿಸುತ್ತಿದೆ. ಯಾಕೆಂದರೆ, ವ್ಯಕ್ತಿ ಒಂಟಿಯಾಗಿದ್ದಾಗ, ಒಂದು ಸಿನಿಮಾ ನೋಡುವ ಸಂದರ್ಭದಲ್ಲಿ ಅನೇಕ ಸಂಗತಿಗಳು ಮನಸನ್ನು ನಾಟುತ್ತವೆ. ಮನರೂಪ ಚಿತ್ರದಲ್ಲಿ ಎರಡನೇ ಭಾಗದಲ್ಲಿ ಬರುವ ಅನೇಕ ಸಂಗತಿಗಳು ಒಂದು ವರ್ಗದ ಯುವಕರು ಮತ್ತು ಕುಟುಂಬವನ್ನು ತಟ್ಟುತ್ತವೆ. ಜೀವನವನ್ನೇ ಆಟವನ್ನಾಗಿಸಿಕೊಳ್ಳುವ ಯುವ ಪೀಳಿಗೆಯ ದುರಂತಮಯ ಚಿತ್ರಣ ಮನರೂಪದಲ್ಲಿದೆ. ಬಿಡಿ ಬಿಡಿಯಾಗಿ ಕಾಣುವ ಮನರೂಪ ಚಿತ್ರದ ಪಾತ್ರದಾರಿಗಳಾದ ಗೌರವ್, ಉಜ್ವಲಾ, ಪೂರ್ಣಾ, ಶಶಾಂಕ್ ಮತ್ತು ಶರವಣ್ ಅವರ ಮನಸುಗಳು ಈ ಕಾಲದ ನಿಜವಾದ ಸವಾಲುಗಳು. ಮನುಷ್ಯನ ಮನಸಿನ ಜಾಡು ಹಿಡಿದು ಸಾಗುವ ಮನರೂಪ ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ, ಎಂದು ಖುಷಿಯನ್ನು ಹಂಚಿಕೊಂಡರು.

ಇದಲ್ಲದೇ, ಮನರೂಪ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಬಾಚಿಕೊಂಡಿದೆ. ’ಉತ್ತಮ ಪ್ರಯೋಗಾತ್ಮಕ ಸಿನಿಮಾ’ ಎಂದು ಮುಂಬೈನಲ್ಲಿ ನಡೆದ ಕೆಫೆ ಇರಾನಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬಣ್ಣಿಸಿದೆ. ಇದಲ್ಲದೇ ಅಮೆರಿಕಾದ ಮಿಯಾಮಿ ಇಂಟರ್‌ನ್ಯಾಷನಲ್ ಚಲನಚಿತ್ರೋತ್ಸವ ಮತ್ತು ಟರ್ಕಿಯ ಇಸ್ತಾನ್‌ಬುಲ್ ಫಿಲ್ ಅವಾರ್ಡ್ಸ್ ಚಿತ್ರೋತ್ಸವಗಳಲ್ಲೂ ಮನರೂಪ ಆಯ್ಕೆಯಾಗಿದೆ.

ಮನರೂಪ ಚಿತ್ರದಲ್ಲಿ ಹೊಸಬರೇ ಬಣ್ಣ ಹಚ್ಚಿದ್ದರು. ದಿಲೀಪ್ ಕುಮಾರ್, ಅನೂಷಾ ರಾವ್, ನಿಷಾ ಯಶ್ ರಾಮ್, ಆರ್ಯನ್, ಶಿವಪ್ರಸಾದ್, ಅಮೋಘ್ ಸಿದ್ಧಾರ್ಥ್, ಪ್ರಜ್ವಲ್ ಗೌಡ, ಗಜಾ ನೀನಾಸಂ, ರಮಾನಂದ ಐನಕೈ, ಬಿ. ಸುರೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಗೋವಿಂದರಾಜ್ ಛಾಯಾಗ್ರಹಣ, ಸರ್ವಣ ಅವರ ಸಂಗೀತ, ಲೋಕಿ-ಸೂರಿ ಅವರ ಸಂಕಲನ ಮತ್ತು ಹುಲಿವಾನ್ ನಾಗರಾಜ್ ಅವರ ಸೌಂಡ್ ಡಿಸೈನ್ ಈ ಚಿತ್ರಕ್ಕಿದೆ. ಸಾಹಿತಿ ಮತ್ತು ಪತ್ರಕರ್ತ ಮಹಾಬಲ ಸೀತಾಳಭಾವಿ ಅವರ ಸಂಭಾಷಣೆ ಬರೆದಿದ್ದಾರೆ.

ಮನರೂಪ ಆಕರ್ಷಣೆಗಳು

  • ಕಿರಣ್ ಹೆಗಡೆ ಅವರ ವಿಭಿನ್ನ ಕಥೆ ಮತ್ತು ನಿರೂಪಣೆ, ಗೋವಿಂದರಾಜ್ ಅವರ ಕ್ಯಾಮೆರಾ ಕೈಚಳಕ, ಸರವಣ ಅವರ ಥ್ರಿಲ್ ಮೂಡಿಸುವ ಸಂಗೀತ, ಲೋಕಿ ಮತ್ತು ಸೂರಿ ಅವರ ಸಂಕಲನ ಮತ್ತು ನಾಗರಾಜ್ ಅವರ ಶಬ್ಧ ವಿನ್ಯಾಸ ಮನರೂಪದ ಅಂದವನ್ನು ಹೆಚ್ಚಿಸಿದೆ.
  • ಗಜಾ ನೀನಾಸಂ ಒಂದೇ ಟೇಕ್‌ನಲ್ಲಿ ೭ ನಿಮಿಷದ ಅಭಿನಯ ಮಾಡಿರುವುದು. ಮುಖ್ಯವಾಗಿ ಕಟ್ ಇಲ್ಲದ ದೃಶ್ಯ ಇದು. ಕ್ಯಾಮೆರಾ ಓಡಾದುವ ಬದಲು ನಟ ಇಡೀ ಅರಣ್ಯವನ್ನು ಓಡಾಡಿ ಅಭಿನಯಿಸಿರುವುದು ಮತ್ತು ಎಮೋಷನ್‌ನ್ನು ಕಟ್ಟಿಕೊಟ್ಟಿರುವುದು.
  • ದಿಲೀಪ್ ಕುಮಾರ್ ಮತ್ತು ಅಮೋಘ್ ಸಿದ್ಧಾರ್ಥ್ ಅವರ ಮನೋಜ್ಞ ಅಭಿನಯ ಮತ್ತು ಭಯಂಕರ ಕಾಡು
  • ಈ ಕಾಲದ ಹುಡುಗರ ಒಂಟಿತನ, ಅಸಹಜತೆ, ನೆಮ್ಮದಿಯ ಹುಡುಕಾಟದ ಛಾಯೆ ಮನರೂಪದ ಆಕರ್ಷಣೆ.
ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬೇರೆ ಮಾತೇ ಇಲ್ಲ. ಸಂಗೀತ ನನ್ನ ಉಸಿರು.

Previous article

ತುಪಾಕಿ ಸಿನಿಮಾದಿಂದ ರೆಹಮಾನ್ ಔಟ್!

Next article

You may also like

Comments

Leave a reply

Your email address will not be published. Required fields are marked *