ರವಿಚಂದ್ರನ್ ಪುತ್ರ ಮನೋರಂಜನ್ ಸಾಕಷ್ಟು ತಯಾರಿ ಮಾಡಿಕೊಂಡ ಬಳಿಕ ಹೊಸಾ ಚಿತ್ರಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರಕ್ಕೆ ಪ್ರಾರಂಭ ಎಂಬ ಹೆಸರೂ ನಿಗಧಿಯಾಗಿದೆ. ಸಾಕಷ್ಟು ಸಮಯದಿಂದ ಪ್ರಾರಂಭಕ್ಕೆ ನಾಯಕಿಯನ್ನು ಆಯ್ಕೆ ಮಾಡೋ ಕಾರ್ಯ ಚಾಲ್ತಿಯಲ್ಲಿತ್ತು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿಯೇ ಸರ್ಕಸ್ಸು ನಡೆಸಿ ಕಡೆಗೂ ಕೀರ್ತಿ ಕಲಕೇರಿಯನ್ನು ನಾಯಕಿ ಪಾತ್ರಕ್ಕೆ ನಿಕ್ಕಿ ಮಾಡಲಾಗಿದೆ.
ಕೀರ್ತಿ ಕಲಕೇರಿ ಮಾಡೆಲಿಂಗ್ ಕ್ಷೇತ್ರದಲ್ಲಿ ಛಾಪು ಮೂಡಿಸಿರೋ ಹುಡುಗಿ. ಈಗಾಗಲೇ ಮಿಸ್ ಗೋವಾ ಕರೀಟವನ್ನೂ ಮುಡಿಗೇರಿಸಿಕೊಂಡಿರುವ ಈಕೆ ಪಕ್ಕಾ ಕನ್ನಡತಿ. ಹುಬ್ಬಳ್ಳಿಯ ಕೀರ್ತಿ ಈಗಿನ್ನೂ ಹದಿನೆಂಟರ ಹುಡುಗಿ. ಈ ಚಿತ್ರದ ನಾಯಕಿ ಪಾತ್ರಕ್ಕೆ ಮುಗ್ಧ ಮುಖ ಭಾವ ಹೊತ್ತ ತಾಜಾ ಮುಖವೊಂದು ಬೇಕಾಗಿತ್ತಂತೆ. ಅದಕ್ಕಾಗಿ ಆಡಿಷನ್ ನಡೆಸಿದ್ದ ಚಿತ್ರತಂಡ ಎಪ್ಪತ್ತಕ್ಕೂ ಅಧಿಕ ಹುಡುಗೀರಲ್ಲಿ ಕೀರ್ತಿಯನ್ನು ಆಯ್ಕೆ ಮಾಡಿಕೊಂಡಿದೆ.
ಪ್ರಾರಂಭವನ್ನು ಮನು ಕಲ್ಯಾಡಿ ನಿರ್ದೇಶನ ಮಾಡಲಿದ್ದಾರೆ. ಜಗದೀಶ್ ಕಲ್ಯಾಡಿ ಹಣ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಕೌಟುಂಬಿಕ ಕಥಾಹಂದರ ಹೊಂದಿರೋ ಈ ಚಿತ್ರಕ್ಕೆ ತಿಂಗಳೊಪ್ಪತ್ತಿನಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ.
#
No Comment! Be the first one.