ಮನೆಯ ಹಿರಿಯರನ್ನು ಸ್ಮರಿಸುವುದಕ್ಕಾಗಿಯೇ ಒಂದು ತಿಂಗಳನ್ನು ನಮ್ಮ ಹಿಂದೂ ಶಾಸ್ತ್ರದಲ್ಲಿ ಮೀಸಲಿಡಲಾಗಿದೆ. ಆ ತಿಂಗಳನ್ನು ಪಿತೃ ಪಕ್ಷವೆಂದು, ಆ ಆಚರಣೆಗೆ ಮಾರ್ಲಾಮಿ ಹಬ್ಬವೆಂದು ಕರೆಯುತ್ತಾರೆ. ಈ ಆಚರಣೆ ಹೇಗೆ ಬಂತು? ಇದರ ಹಿನ್ನೆಲೆ ಏನು? ಈ ಹಬ್ಬದ ವಿಶೇಷಗಳೇನು? ಈ ಎಲ್ಲಾ ಸಂಗತಿಗಳನ್ನಿಟ್ಟುಕೊಂಡು ಈಗ ಸ್ಯಾಂಡಲ್‍ವುಡ್‍ನಲ್ಲಿ ಚಲನಚಿತ್ರ ವೊಂದು ನಿರ್ಮಾಣವಾಗುತ್ತಿದೆ. ಟಿ. ವಿನಯ್‍ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಮಾರ್ಲಾಮಿ ಎಂದು ಟೈಟಲ್ಲಿಡಲಾಗಿದೆ. ಇತ್ತೀಚಿಗೆ ಮುಹೂರ್ತ ಕಾರ್ಯಕ್ರಮವನ್ನು ಮಾರ್ಲಾಮಿ ಗವಿಪುರಂ ಗುಟ್ಟಹಳ್ಳಿಯ ಬಂಡೆ ಮಹಾಕಾಳಿಯ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಿಕೊಂಡಿತು. ದೃಶ್ಯವೊಂದಕ್ಕೆ ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಕ್ಲ್ಯಾಪ್ ಮಾಡಿದರೆ ಧಾತ್ರಿ ಮಂಜುನಾಥ್ ಕ್ಯಾಮರಾ ಚಾಲನೆ ಮಾಡಿದರು. ಸರಿಗಮಪ ರಿಯಾಲಿಟಿ ಶೋದ ವಿನ್ನರ್ ಚನ್ನಪ್ಪ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮಾರ್ಲಾಮಿ ಚಿತ್ರದ ನಾಯಕಿಯಾಗಿ ಪದ್ಮಾವತಿ ಧಾರವಾಹಿ ಖ್ಯಾತಿಯ ವರ್ಷಿತ ವರ್ಮ ನಟಿಸುತ್ತಿದ್ದಾರೆ. ಎರಿಕ್ ವಿ.ಜಿ. ಯವರ ಛಾಯಾಗ್ರಹಣ ಹಾಗೂ ಅರುಣ್ ಆಂಡ್ರೋ ಅವರ ಸಂಗೀತ ಈ ಚಿತ್ರಕ್ಕಿದೆ.

ಈ ಚಿತ್ರದಲ್ಲಿ ಕಥೆಯೇ ಹೀರೋ. ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಇರಲಿದೆಯಂತೆ. ಚೆನ್ನಪ್ಪ ಅವರ ಪಾತ್ರ ಚಿತ್ರಕ್ಕೆ ಹೊಸ ತಿರುವು ಕೊಡಲಿದ್ದು, ಇದರ ಜೊತೆಗೆ ಹಾರರ್ ಟಚ್ ಕೂಡ ಮಾರ್ಲಾಮಿಗೆ ಇದೆಯಂತೆ..  ಚಿತ್ರದಲ್ಲಿ 5 ಹಾಡುಗಳಿದ್ದು, ಅರುಣ್ ಆಂಡ್ರಮ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ವರುಣ್ ಮೋಹನ್ ಜುನೇಜ, ಶೋಭರಾಜ್, ಮುನಿ ಕೆಂಪೇಗೌಡ, ಸುಧಾ, ದಿನೇಶ್ ಗುರೂಜಿ, ರೆಮೋ ಉಳಿದ ತಾರಾಬಳಗದಲ್ಲಿದ್ದಾರೆ.

 

 

 

CG ARUN

ಸೆನ್ಸಾರ್ ಮಂಡಳಿ ಪ್ರಶಂಸೆಗೆ ಪಾತ್ರವಾದ ಕನ್ನಡ ಸಿನಿಮಾ `ನನ್ನ ಪ್ರಕಾರ’

Previous article

ಮೃಂದ ಗೇಮ್ ಆಧಾರಿತ ಸಿನಿಮಾ ‘ಆಪರೇಷನ್ ನಕ್ಷತ್ರ’

Next article

You may also like

Comments

Leave a reply

Your email address will not be published. Required fields are marked *