ಈ ಹಿಂದೆ ತೆರೆ ಕಂಡಿದ್ದ ಜುಗಾರಿ ಮತ್ತು ಲಾಸ್ಟ್ ಬಸ್ ಚಿತ್ರಗಳು ಭಾರೀ ಪ್ರಶಂಸೆಗೆ ಪಾತ್ರವಾಗಿದ್ದವು. ಇದಕ್ಕೆ ಸಿಕ್ಕ ಪ್ರೇಕ್ಷಕರ ಬೆಂಬಲದಿಂದ ಉತ್ತೇಜಿತರಾದ ನಿರ್ದೇಶಕ ಎಸ್.ಡಿ ಅರವಿಂದ್ ಮಟಾಶ್ ಎಂಬ ಚಿತ್ರವನ್ನ ಶುರು ಮಾಡಿಕೊಂಡಿದ್ದರು. ಇತ್ತೀಚೆಗೆ ಬಿಡುಗಡೆಯಾಗಿರೋ ಮೋಷನ್ ಪೋಸ್ಟರ್ ಮೂಲಕವೇ ಈ ಚಿತ್ರ ಲಾಸ್ಟ್ ಬಸ್ ಅನ್ನೇ ಮೀರಿಸುವಂತೆ ಕುತೂಹಲ ಹುಟ್ಟಿಸಿದೆ!
ಲಾಸ್ಟ್ ಬಸ್ ಚಿತ್ರದ ಭಿನ್ನವಾದ ನಿರೂಪಣೆ, ಕಥಾ ಶೈಲಿಯಿಂದ ಗಮನ ಸೆಳೆದಿದ್ದ ಅರವಿಂದ್ ಮಟಾಷ್ ಚಿತ್ರದ ಮೂಲಕವೂ ಅಂಥಾದ್ದೇ ವಿಶಿಷ್ಟವಾದೊಂದು ಕಥೆಯನ್ನು ಮುಟ್ಟಿದ್ದಾರೆ. ೨೦೧೬ರಲ್ಲಿ ನಡೆದ ನೋಟು ಅಮಾನ್ಯೀಕರಣದ ನಿರ್ಧಾರದಿಂದ ಸರಿರಾತ್ರಿಯಲ್ಲಿ ಇಡೀ ಭಾರತದ ಅರ್ಥ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತಲ್ಲಾ? ಅದರ ಸುತ್ತಲಿನ ನೈಜ ಘಟನೆಗಳನ್ನಾಧರಿಸಿ ಕಾಲ್ಪನಿಕ ಕಥೆಯೊಂದನ್ನು ಅರವಿಂದ್ ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ.
ನೋಟು ಅಮಾನ್ಯೀಕರಣದ ನಂತರದ ಘಟನಾವಳಿಗಳೆಲ್ಲವೂ ನಮ್ಮೆಲ್ಲರ ಕಣ್ಣ ಮುಂದೆಯೇ ನಡೆದಿವೆ. ಪರ ವಿರೋಧ, ಆ ನಂತರದ ವಿದ್ಯಮಾನಗಳೆಲ್ಲವೂ ಭಾರತೀಯರಿಗೆ ಸ್ಪಷ್ಟವಾಗಿಯೇ ಗೊತ್ತಿದೆ. ಈ ಘಟನೆಯನ್ನಿಟ್ಟುಕೊಂಡು ಅರವಿಂದ್ ಯಾವ ಥರದ ಕಥೆ ಹೊಸೆದಿದ್ದಾರೆಂಬ ಬಗ್ಗೆಯೇ ಪ್ರೇಕ್ಷಕರೆಲ್ಲ ಕುತೂಹಲಿಗಳಾಗಿದ್ದಾರೆ. ಲಾಸ್ಟ್ ಬಸ್ ಚಿತ್ರದಲ್ಲಿ ಅರವಿಂದ್ ಅವರ ಕೈಚಳಕ ಕಂಡವರಂತೂ ಈ ಚಿತ್ರದ ಬಗ್ಗೆ ಬಾರೀ ಹೋಪ್ ಹೊಂದಿರೋದಂತೂ ಸತ್ಯ.
ಮೋಷನ್ ಪೋಸ್ಟರ್ ಮೂಲಕವೇ ಮಟಾಶ್ ಚಿತ್ರದ ಅಸಲೀ ಹೊಸತನ ಜಾಹೀರಾಗಿದೆ. ಅದುವೇ ಈ ಚಿತ್ರದತ್ತ ಪ್ರೇಕ್ಷಕರು ಬೆರಗಿನ ಕಣ್ಣಿಡುವಂತೆ ಮಾಡಿದೆ.
#
No Comment! Be the first one.