ಸಿನಿ ತಾರೆಗಳೇ ಹಾಗೆ ಅನ್ನಿಸುತ್ತೆ. ಪ್ರಣಯ ಪಕ್ಷಿಗಳ ಹಾಗೆ ಜತೆ ಜತೆಯಾಗಿ ಸುತ್ತಾಡುತ್ತಾ, ಖಾಸಗಿ ಕಾರ್ಯಕ್ರಮಗಳಲ್ಲಿ ಎಲ್ಲರ ಕಣ್ಣುಕುಕ್ಕುವಂತೆ ಓಡಾಡುತ್ತಾ ಇಲ್ಲ ಸಲ್ಲದ ಮಾತುಗಳು ಹೊರಬಿದ್ದರೂ ತುಟಿಪಿಟಿಕ್ ಎನ್ನದೇ ಉಳಿದು ಅಂತಿಮವಾಗಿ ನಾವು ಮದುವೆಯಾಗಲಿದ್ದೇವೆ, ಬೇರೆಯಾಗಲಿದ್ದೇವೆ ಇತ್ಯಾದಿಗಳನ್ನು ಹೇಳಿಬಿಡ್ತಾರೆ. ಹಾಗಂತ ಅದೇನೂ ನೋಡುಗರಿಗೆ ಹೊಸ ವಿಚಾರವೋ, ಆಶ್ಚರ್ಯದ ಸಂಗತಿಯೋ ಆಗಿರಲಿಕ್ಕಿಲ್ಲ. ಇನ್ನೂ ಕೆಲವೊಮ್ಮೆ ಜತೆ ಜತೆಯಾಗಿ ತಿರುಗಿಲ್ಲ. ಮಾತನಾಡಿಲ್ಲ. ಆದರೆ ಮದುವೆಯಾಗಿರುತ್ತಾರೆ. ಲೀವಿಂಗ್ ಟು ಗೆದರ್ ನಲ್ಲೂ ಇದ್ದುಬಿಡುತ್ತಾರೆ.
ಇಲ್ಲೊಬ್ಬ ನಟಿ ತನ್ನ ಮದುವೆಯ ವಿಚಾರವನ್ನೂ ಪಬ್ಲಿಕ್ ಮಾಡದೇ ಗುಟ್ಟಾಗಿ ಮದುವೆಯಾಗಿ, ನಂತರ ತನ್ನ ಮದುವೆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅದೇನೋ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಂಡಿದ್ದಾರೆ.
ಅಷ್ಟಕ್ಕೂ ಆ ನಟಿ ಬೇರೆ ಯಾರೂ ಅಲ್ಲ. ಶಿವರಾಜ್ ಕುಮಾರ್ ಅಭಿನಯದ ಡಾನ್ ಸಿನಿಮಾದಲ್ಲಿ ಶಿವಣ್ಣನಿಗೆ ಜೋಡಿಯಾಗಿ ನಟಿಸಿದ್ದ ಮೇಘನಾ ನಾಯ್ಡು. ಹೌದು. ಆಕೆ ಎಂದೋ ಮದುವೆಯಾಗಿದ್ದು, ಇತ್ತೀಚೆಗಷ್ಟೇ ತನ್ನ ಗುಟ್ಟಿನ ಮದುವೆಯ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಬಗ್ಗೆ ಫೋಟೋ ಹಾಕಿ ತನ್ನ ಮನಸಿನ ಮಾತುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ತಾನು ಟೆನಿಸ್ ಆಟಗಾರ ಲೂಯಿಸ್ ಮಿಗುಯೆಲ್ ರೆಯಿಸ್ ಅವರನ್ನು ವಿವಾಹವಾಗಿರುವುದಾಗಿ, ಬಿಗ್ ನ್ಯೂಸ್ ನೀಡುತ್ತಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಅಲ್ಲದೇ ನನಗೆ ಅದ್ದೂರಿಯಾಗಿ ಮದುವೆಯಾಗಲು ಇಷ್ಟವಿರಲಿಲ್ಲ. ಅಷ್ಟೇ ಅಲ್ಲ ಮದುವೆಯ ನಂತರದ ದಿನಗಳನ್ನು ನಾನು ಸಂಭ್ರಮಿಸಬೇಕಿತ್ತು. ನಮ್ಮ ಈ ಪಯಣಕ್ಕೆ ಸುಮಾರು 8 ವರ್ಷಗಳಾಗಿವೆ. ನನಗೆ ಇಂತಹ ಸುಂದರ ಜೀವನ ಕೊಟ್ಟ ಲೂಯಿಸ್ ಮುಗಿಯೆಲ್ ಗೆ ಧನ್ಯವಾದ ಎಂದಿದ್ದಾರೆ.
No Comment! Be the first one.