ಡಾ. ರಾಜ್ ಕುಮಾರ್ ಕುಟುಂಬದ ಕುಡಿಗಳು ಸದ್ಯದಲ್ಲಿಯೇ ಒಂದೇ ಸ್ಕ್ರೀನ್ ನಲ್ಲಿ ಒಂದೇ ಸಿನಿಮಾದಲ್ಲಿ ಕಮಾಲು ಮಾಡಲಿದ್ದಾರೆ. ಹೌದು ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಒಂದೇ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ರಾಜ್ ಪುಣ್ಯ ತಿಥಿ ಅಂಗವಾಗಿ ರಾಜಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ರಾಘವೇಂದ್ರ ರಾಜ್ ಕುಮಾರ್ ಸೀಕ್ರೇಟ್ ರಿವೀಲ್ ಮಾಡಿದ್ರು.
“ಎರಡು ವರ್ಷಗಳಿಂದ ನನ್ನ ದೇಹದ ಅರ್ಧ ಭಾಗ ಕೆಲಸ ಮಾಡುತ್ತಿರಲಿಲ್ಲ. ಅಪ್ಪಾಜಿ ಆಶೀರ್ವಾದದಿಂದ ಮೂರು ಸಿನಿಮಾ ಮಾಡುತ್ತಾ ಇದ್ದೇನೆ. ಈವರೆಗೂ ರಾಜ್ ಕುಮಾರ್ ಮಕ್ಕಳು ಒಂದೇ ಸಿನಿಮಾದಲ್ಲಿ ಅಭಿನಯಿಸಿಲ್ಲ ಎಂಬ ಅಪವಾದವಿತ್ತು. ಆದರೆ ಆ ಅಪವಾದವನ್ನು ಈ ದೂರ ಮಾಡುವ ಪ್ರಯತ್ನದಲ್ಲಿದ್ದೇವೆ. ಉತ್ತಮ ಕಥೆಯ ಹುಡುಕಾಟದಲ್ಲಿದ್ದು, ಒಳ್ಳೆಯ ಕಥೆ ಸಿಕ್ಕರೆ ಆದಷ್ಟು ಬೇಗ ಒಟ್ಟಿಗೆ ಸಿನಿಮಾ ಮಾಡಲಿದ್ದೇವೆ” ಎಂದು ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿವರಾಜ್ ಕುಮಾರ್, ಆದಷ್ಟು ಬೇಗ ಆಗಲಿ. ನಮ್ಮದೇ ಪ್ರೊಡಕ್ಷನ್ ನಲ್ಲಿ ಸಿನಿಮಾ ಆದರೆ ನನಗೆ ತುಂಬಾ ಸಂತೋಷವಾಗುತ್ತದೆ. ಬೇರೆ ತರವಾದ ಸಬ್ಜೆಕ್ಟ್ ಮಾಡಿ ಮಾಡಬೇಕು” ಎಂದರು. ಇನ್ನು ಪುನೀತ್ ರಾಜ್ ಕುಮಾರ್ ಮಾತನಾಡಿ “ಒಳ್ಳೆಯ ಕಥೆ ಬರಲಿ ಖಂಡಿತ ಮಾಡೋಣ” ಎಂದರು.
No Comment! Be the first one.