ಶಶಿಕುಮಾರ್ ಪುತ್ರನ ಮೊಡವೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀರೋ ಆಗಿ ಎಂಟ್ರಿ ಕೊಡುತ್ತಿರುವ ಆದಿತ್ಯನಿಗೆ ಶುಭಕೋರಿ ಹಾರೈಸಿದ್ದಾರೆ. ಈ ಸಮಾರಂಭದಲ್ಲಿ ಮತ್ತೋರ್ವ ಅತಿಥಿಯಾಗಿ ಭಾಗವಹಿಸಿದ್ದ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಖುದ್ದು ದರ್ಶನ್ ಅವರೇ ಆತ್ಮೀಯವಾಗಿ ಮಾತಾಡಿಸಿದ್ದಾರೆ. ಈ ಫೋಟೋವನ್ನು ಫೇಸ್ಬುಕ್ಕಲ್ಲಿ ಅಪ್ಲೋಡ್ ಮಾಡಿಕೊಳ್ಳುವ ಮೂಲಕ ರಾಘವೇಂದ್ರ ರಾಜ್ ಕುಮಾರ್ ಖುಷಿ ಹಂಚಿಕೊಂಡಿದ್ದಾರೆ..
ಮೊಡವೆ ಚಿತ್ರದ ಮುಹೂರ್ತದಲ್ಲಿ ಪಾಲ್ಗೊಂಡಿದ್ದ ರಾಘವೇಂದ್ರ ರಾಜ್ ಕುಮಾರ್ ಅವರನ್ನು ದರ್ಶನ್ ಅವರೇ ಮಾತಾಡಿಸಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ನಂತರ ಇಬ್ಬರೂ ಆತ್ಮೀಯವಾಗಿ ಮಾತಾಡಿದ್ದಾರೆ. ದರ್ಶನ್ ಅವರು ರಾಘವೇಂದ್ರ ರಾಜ್ಕುಮಾರ್ ಅವರ ಆರೋಗ್ಯವನ್ನೂ ವಿಚಾರಿಸಿಕೊಂಡಿದ್ದಾರೆ. ಬಹು ಕಾಲದ ನಂತರ ವಿಭಿನ್ನವಾದ ಗೆಟಪ್ಪಿನಲ್ಲಿ ನಟನೆಗೆ ಮರಳಿರೋ ರಾಘವೇಂದ್ರ ರಾಜ್ ಕುಮಾರ್ಗೆ ದರ್ಶನ್ ಶುಭ ಕೋರಿಸಿದ್ದಾರೆ.
ತಾವು ದರ್ಶನ್ರೊಂದಿಗಿರೋ ಫೋಟೋವನ್ನು ರಾಘವೇಂದ್ರ ರಾಜ್ ಕುಮಾರ್ ಫೇಸ್ಬುಕ್ಕಲ್ಲಿ ಹಾಕಿಕೊಳ್ಳುತ್ತಲೇ ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ. ಬದಲಾದ ರಾಘಣ್ಣನ ಗೆಟಪ್ಪಿನ ಬಗ್ಗೆ, ದರ್ಶನ್ ಅವರ ಸ್ನೇಹಶೀಲತೆಯ ಬಗ್ಗೆ ಜನ ಪ್ರತಿಕ್ರಿಯಿಸಿದ್ದಾರೆ.
ಇವರಿಬ್ಬರ ಸಮ್ಮುಖದಲ್ಲಿಯೇ ಶಶಿಕುಮಾರ್ ಪುತ್ರ ಆದಿತ್ಯನ ಚಿತ್ರಕ್ಕೂ ಮುಹೂರ್ತ ನೆರವೇರಿದೆ. ಈ ನೆಪದಲ್ಲಿಯೇ ರಾಘವೇಂದ್ರ ರಾಜ್ಕುಮಾರ್ ಮತ್ತು ದರ್ಶನ್ ಬಹು ಕಾಲದ ನಂತರ ಭೇಟಿಯಾಗಿದ್ದಾರೆ.
#
No Comment! Be the first one.