ಎರಡು ವರ್ಷಗಳ ಕಾಲ ಬರ್ತಡೇ ಆಚರಿಸಿಕೊಳ್ಳದಿದ್ದ ಸುದೀಪ್ ಅವರು ಈ ಸಲ ಅದಕ್ಕೆ ಮನಸು ಮಾಡಿದ್ದೇ ಅಭಿಮಾನಿಗಳ ಪಾಲಿಗೆ ದೊಡ್ಡ ಸಡಗರ. ಪ್ರತೀ ವರ್ಷ ಬರ್ತಡೇ ನೆಪದಲ್ಲಾದರೂ ಕಿಚ್ಚನ ಭೇಟಿ ಸಾಧ್ಯವಾಗುತ್ತದೆಂಬ ಖುಷಿಯೂ ಕೈತಪ್ಪಿದ್ದರಿಂದ ಬೇಸರಾಗಿದ್ದ ಅಭಿಮಾನಿಗಳ ಕಡೆಯಿಂದ ಈ ಬಾರಿ ಸುದೀಪ್ ಅವರಿಗೆ ದೊಡ್ಡ ಗಿಫ್ಟೊಂದು ಸಿಕ್ಕಿದೆ!
ಆದರೆ ಕಿಚ್ಚನಿಗೆ ಸಿಕ್ಕ ಈ ಗಿಫ್ಟು ವಸ್ತುವಿನ ರೂಪದಲ್ಲಿಲ್ಲ. ಬದಲಾಗಿ ಅಭಿಮಾನಿಗಳೆಲ್ಲರ ವರ್ತನೆಯ ರೂಪದಲ್ಲಿದೆ!
ಸುದೀಪ್ ತಮ್ಮ ಬರ್ತಡೇ ನೆಪದಲ್ಲಿ ಯಾವುದೇ ರೀತಿಯ ಪರಿಸರ ಮಾಲಿನ್ಯವಾಗೋದನ್ನು ಸಹಿಸೋದಿಲ್ಲ ಎಂಬುದು ಅಭಿಮಾನಿಗಳಿಗೆಲ್ಲ ಗೊತ್ತೇ ಇದೆ. ಆದ್ದರಿಂದಲೇ ಈ ಬಾರಿಯದ್ದು ಕಿಚ್ಚನ ಪಾಲಿಗೆ ಪರಿಸರಸ್ನೇಹಿ ಬರ್ತಡೇ. ಯಾಕೆಂದರೆ, ಈ ಹುಟ್ಟುಹಬ್ಬದ ನೆಪದಲ್ಲಿ ಅಭಿಮಾನಿಗಳು ಬಟ್ಟೆಯಿಂದ ತಯಾರಿಸಿದ ಭಾರೀ ಗಾತ್ರದ ಕಟೌಟುಗಳನ್ನು ನಿಲ್ಲಿಸಿದ್ದಾರೆ. ಇದೂ ಸೇರಿದಂತೆ ಎಲ್ಲ ಅಲಂಕಾರಗಳನ್ನೂ ಕೂಡಾ ಪ್ಲಾಸ್ಟಿಕ್ ಬಳಸದೆಯೇ ಮಾಡಿದ್ದದ್ದು ವಿಶೇಷ.
ಈ ಕೆಲಸದಿಂದ ಕಿಚ್ಚ ಖುಷಿಗೊಂಡಿದ್ದಾರೆ. ಅಭಿಮಾನಿಗಳ ಮೇಲೇ ಅವರ ಅಭಿಮಾನದ ಮಾತನ್ನಾಡಿದ್ದಾರೆ. ಸಾಮಾನ್ಯವಾಗಿ ಇಂಥಾ ಸಂದರ್ಭಗಳಲ್ಲಿ ಇದುವರೆಗೂ ಊರ ತುಂಬಾ ಪ್ಲಾಸ್ಟಿಕ್ ಐಟಮ್ಮುಗಳೇ ಇಟ್ಟಾಡೋದು ಮಾಮೂಲು. ಅದರಲ್ಲಿ ಒಂದಷ್ಟು ಪಾಲು ಕಸವಾಗಿ ಭೂಮಿಯ ಒಡಲು ಸೇರೋದೇ ಹೆಚ್ಚು. ಅದನ್ನು ತಡೆಯೋ ನಿಟ್ಟಿನಲ್ಲಿ ಕಿಚ್ಚನ ಬರ್ತಡೆ ಮಹತ್ವದ ಹೆಜ್ಜೆ ಇಟ್ಟಿದೆ. #
No Comment! Be the first one.