ಕೆಲವೊಂದು ಸಿನಿಮಾಗಳೇ ಹಾಗೆ. ಕಾರಣವೇ ಇಲ್ಲದೆ ಎಳೆದಾಡಿಬಿಟುತ್ತವೆ. ಎಲ್ಲವೂ ತಯಾರಿದ್ದೂ ಬಿಡುಗಡೆ ಲೇಟಾಗಿಬಿಡುತ್ತವೆ. ಆ ಕೆಟಗರಿಗೆ ಸೇರುವ ಸಿನಿಮಾ ಎಂ.ಆರ್.ಪಿ.. ಸದ್ಯದ ಮಟ್ಟಿಗೆ ಸೀನಿಯರ್ ಡೈರೆಕ್ಷರ್ ಅನ್ನಿಸಿಕೊಂಡಿರುವ ಎಂ.ಡಿ. ಶ್ರೀಧರ್,, ಎಂ.ಡಿ.ಶ್ರೀಧರ್, ಎ.ವಿ.ಕೃಷ್ಣಕುಮಾರ್, ಮೋಹನ್‌ಕುಮಾರ್ ಎನ್.ಜಿ. ಹಾಗೂ ರಂಗಸ್ವಾಮಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರೆಲ್ಲಾ ಸಿನಿಮಾ ರಂಗವನ್ನು ತೀರಾ ಹತ್ತಿರದಿಂದ ಬಲ್ಲವರು. ಯಾವಾಗ ಶುರು ಮಾಡಿ ಹೇಗೆ ರಿಲೀಸ್ ಮಾಡಿದರೆ ಲಾಭ ಮಾಡಬಹುದು ಅನ್ನೋದನ್ನು ಕರಾರುವಕ್ಕಾಗಿ ತಿಳಿದಿರುವವರು. ಇಷ್ಟು ಅನುಭವಿಗಳಿದ್ದೂ ಸಹ ಎಂ.ಆರ್.ಪಿ. ಎನ್ನುವ ಸಿನಿಮಾ ರಿಲೀಸು ತೀರಾ ತಡವಾಗಿದೆ. ಈ ಸಿನಿಮಾಗೆ ಕೊರೋನಾ ಕೊಟ್ಟ ಕಾಟ ಕೂಡಾ ದೊಡ್ಡದೇ. ಲೇಟಾದ ಮಾತ್ರಕ್ಕೆ ಸ್ಟೇಲ್ ಆಗುವಂತಾ ಕತೆ ಇದರಲ್ಲಿಲ್ಲ ಅನ್ನೋದೇ ಸಮಾಧಾನದ ವಿಚಾರ.

ಸ್ಥೂಲಕಾಯದ ವ್ಯಕ್ತಿಗಳು ಸಮಾಜದಲ್ಲಿ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ, ಅದನ್ನು ಸಮಸ್ಯೆ ಎಂದುಕೊಳ್ಳದೆ ವರವೆಂದು ಭಾವಿಸಿ ಕೆಲಸದ ಕಡೆ ಗಮನ ಕೊಟ್ಟರೆ ಅವರೂ ಸಮಾಜ ಗುರುತಿಸುವಂಥ ವ್ಯಕ್ತಿಯಾಗಿ ಬೆಳೆಯಬಹುದು ಎಂಬ ಸಂದೇಶವಿರುವ ಚಿತ್ರ “ಎಂಆರ್‌ಪಿ” ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರಕ್ಕೆ ಬಾಹುಬಲಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರ ಪ್ರಕಾರ ಎಂಆರ್ ಪಿ ಎಂದರೆ ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್. ಎಂ.ಡಿ.ಶ್ರೀಧರ್, ಎ.ವಿ.ಕೃಷ್ಣಕುಮಾರ್, ಮೋಹನ್‌ಕುಮಾರ್ ಎನ್.ಜಿ. ಹಾಗೂ ರಂಗಸ್ವಾಮಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸ್ಥೂಲಕಾಯದ ವ್ಯಕ್ತಿಯೊಬ್ಬ ಐಟಿ ಕಂಪನಿಯಲ್ಲಿ ಕೆಲಸ ಮಾಡುವಾಗ ಎದುರಿಸುವ ತೊಂದರೆಗಳು, ಆತ ಅಂದುಕೊಂಡಿದ್ದನ್ನು ಸಾಧಿಸಲು ಹೊರಟಾಗ ಬರುವ ಅಡೆತಡೆಗಳು, ಮುಖ್ಯವಾಗಿ ಅಂಥಾ ವ್ಯಕ್ತಿಗಳು ಕೂಡ ಅವಕಾಶ ಪ್ರೋತ್ಸಾಹ ಸಿಕ್ಕರೆ ದೊಡ್ಡ ಸಾಧನೆ ಮಾಡಬಲ್ಲರು ಎನ್ನುವುದೇ ಚಿತ್ರದ ತಿರುಳು. ನವರಸನಾಯಕ ಜಗ್ಗೇಶ್ ಅವರ ವಿವರಣೆಯ ಮೂಲಕ ನಾಯಕನ ಪಯಣ ಸಾಗಲಿದೆ.
ಹರ್ಷವರ್ಧನರಾಜ್ ಈ ಚಿತ್ರದ ೩ ಹಾಡುಗಳಿಗೆ ಸಂಗೀತ ನೀಡಿದ್ದು, ಗುಂಡ್ಲುಪೇಟೆ ಸುರೇಶ್ ಹಾಗೂ ಕೆ.ಕೆ. ಕ್ಯಾಮೆರಾ ವರ್ಕ್ ನಿರ್ವಹಿಸಿದ್ದಾರೆ. ನಾಯಕಿಯಾಗಿ ಚೈತ್ರಾರೆಡ್ಡಿ ಉಳಿದಂತೆ ಬಲ ರಾಜವಾಡಿ, ವಿಜಯ್ ಚೆಂಡೂರ್, ಸುದಾ ಬೆಳವಾಡಿ ನಟಿಸಿದ್ದಾರೆ.
No Comment! Be the first one.