ಕರ್ನಾಟಕದ ಶ್ರೀಮಂತ ರಾಜಕಾರಣಿ ಕಮ್ ಅನರ್ಹ ಶಾಸಕನೆಂದೇ ಫೇಮಸ್ ಆಗಿರುವ ಎಂಟಿಬಿ ನಾಗರಾಜ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡಲಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಬ್ಯುಸಿಯಾಗಿರುವ ಬೆಹೊಸಕೋಟೆಯ ಎಂಟಿಬಿ ನಾಗರಾಜ್ ಸದ್ಯ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ನಟ ಬಿ.ಸಿ. ಪಾಟೀಲ್ ಜತೆಗೆ ಸಮಾಲೋಚನೆಯನ್ನು ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕಥೆಯೊಂದನ್ನು ಕೇಳಿ ಗ್ರೀನ್ ಸಿಗ್ನಲ್ ಕೊಟ್ಟಿರುವ ಎಂಟಿಬಿ ನಾಗರಾಜ್ ನಿರ್ದೇಶಕರ ಹುಡುಕಾಟದ ಪ್ರಕ್ರಿಯೆಯನ್ನು ಸದ್ದಿಲ್ಲದೇ ನಡೆಸುತ್ತಿದ್ದಾರೆ. ಅಲ್ಲದೇ ಸದ್ಯದಲ್ಲಿಯೇ ಚಿತ್ರದ ಕುರಿತು ಅಧಿಕೃತ ಮಾಹಿತಿಯನ್ನು ಸ್ವತಃ ಎಂಟಿಬಿ ನಾಗರಾಜ್ ಅವರೇ ಘೋಷಣೆ ಮಾಡಲಿದ್ದಾರೆ.
No Comment! Be the first one.