ಕಲೆಯನ್ನೇ ಉಸಿರಾಗಿಸಿಕೊಂಡ ಚಿತ್ರಕಲಾವಿದೆಯಾಗಿ ಆರ್ಟ್ ಕ್ಯುರೇಟರ್ ಮೀರಾ ಮತ್ತು ವೃತ್ತಿಯಲ್ಲಿ ಐಟಿ ಇಂಜಿನಿಯರಾದರೂ ಫೋಟೋಗ್ರಫಿಯನ್ನು ಪ್ರವೃತ್ತಿಯಾಗಿಸಿಕೊಂಡು ಕಾಡು ಮೇಡು ಅಲೆಯುವ ಪಾರ್ಥರ ಸುತ್ತ ಮುಂದಿನ ನಿಲ್ದಾಣದ ಕತೆ ಸಾಗುತ್ತದೆ. ಯಾರ ಬದುಕು ಎಲ್ಲಿ ಶುರುವಾಗಿ ಎಲ್ಲೆಲ್ಲಿ ನಿಲ್ಲುತ್ತದೆ ಎನ್ನುವ ಲೈಫ್ ಜರ್ನಿ ಕತೆ ‘ಮುಂದಿನ ನಿಲ್ದಾಣ’ ಚಿತ್ರದ್ದು.
ಸಿನಿಮಾವೊಂದು ಪೋಸ್ಟರ್ ಮೂಲಕವೇ ಕ್ರೇಜ಼ು ಕ್ರಿಯೇಟ್ ಮಾಡಿ, ಈ ಸಿನಿಮಾದಲ್ಲಿ ಏನೋ ಇದೆ ಎನ್ನುವ ಕುತೂಹಲ ಹುಟ್ಟಿಸೋದು ಸಲೀಸಲ್ಲ. ವರ್ಷಕ್ಕೆ ಮುನ್ನ ರಿಲೀಸಾಗಿದ್ದ ‘ಮುಂದಿನ ನಿಲ್ದಾಣ’ ಸಿನಿಮಾ ಅಂಥದ್ದೊಂದು ಸಾಧನೆ ಮಾಡಿತ್ತು. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರಿಗೇ ಕ್ಲಾಸ್ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರು ಫಿದಾ ಆಗಿದ್ದರು. ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಮತ್ತು ಚೂರಿಕಟ್ಟೆ ಮುಂತಾದ ಸಿನಿಮಾದ ಮೂಲಕ ಭರವಸೆ ಮೂಡಿಸಿರುವ ನಟ ಪ್ರವೀಣ್ ತೇಜ್ ಮತ್ತು ರಂಗಿತರಂಗದ ರಾಧಿಕಾ ನಾರಾಯಣ್ ‘ಮುಂದಿನ ನಿಲ್ದಾಣ’ದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದರು. ಪ್ರವೀಣ್ ತೇಜ್ ನಟನನೆಯ ವಿಚಾರದಲ್ಲಿ ತನ್ನ ತಾಕತ್ತನ್ನು ಪದೇ ಪದೇ ಸಾಬೀತು ಮಾಡುತ್ತಾ ಬಂದಿದ್ದಾರೆ. ರಾಧಿಕ ಚೇತನ್ ಅದ್ಭುತ ನಟಿ ಅನ್ನೋದು ಎಲ್ಲರಿಗೂ ಗೊತ್ತು. ಇವರಿಬ್ಬರ ನಡುವೆ ಅನನ್ಯಾ ಕಶ್ಯಪ್ ಕೂಡಾ ಈ ಚಿತ್ರದಲ್ಲಿ ಪೈಪೋಟಿ ನೀಡಿದ್ದರು.
ಕಲೆಯನ್ನೇ ಉಸಿರಾಗಿಸಿಕೊಂಡ ಚಿತ್ರಕಲಾವಿದೆಯಾಗಿ ಆರ್ಟ್ ಕ್ಯುರೇಟರ್ ಮೀರಾ ಮತ್ತು ವೃತ್ತಿಯಲ್ಲಿ ಐಟಿ ಇಂಜಿನಿಯರಾದರೂ ಫೋಟೋಗ್ರಫಿಯನ್ನು ಪ್ರವೃತ್ತಿಯಾಗಿಸಿಕೊಂಡು ಕಾಡು ಮೇಡು ಅಲೆಯುವ ಪಾರ್ಥರ ಸುತ್ತ ಮುಂದಿನ ನಿಲ್ದಾಣದ ಕತೆ ಸಾಗುತ್ತದೆ. ಇವರಿಬ್ಬರ ನಡುವೆ ವೈದ್ಯೆಯಾಗಿ ಅನನ್ಯಾ ಕಶ್ಯಪ್ ಪಾತ್ರ ಕೂಡಾ ಎಂಟ್ರಿ ಕೊಡುತ್ತದೆ. ಯಾರ ಬದುಕು ಎಲ್ಲಿ ಶುರುವಾಗಿ ಎಲ್ಲೆಲ್ಲಿ ನಿಲ್ಲುತ್ತದೆ ಎನ್ನುವ ಲೈಫ್ ಜರ್ನಿ ಕತೆ ‘ಮುಂದಿನ ನಿಲ್ದಾಣ’ ಚಿತ್ರದ್ದು. ಬಹುತೇಕ ಜಗತ್ತಿನ ಮೂಲೆ ಮೂಲೆಯಲ್ಲಿ ವಾಸ್ತವ್ಯ ಹೂಡಿರುವ ಮಂಗಳೂರು ಮೂಲದವರು ಸೇರಿ ಕೋಸ್ಟಲ್ ಬ್ರೀಜ಼್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಿಸಿದ್ದ ‘ಮುಂದಿನ ನಿಲ್ದಾಣ’ವನ್ನು ವಿನಯ್ ಭಾರದ್ವಾಜ್ ನಿರ್ದೇಶ ಮಾಡಿದ್ದಾರೆ.
ಮಿಲೆನಿಯಲ್ಗಳ ಬದುಕನ್ನು ಇಂಚಿಂಚಾಗಿ ತೆರೆದಿಟ್ಟಿದ್ದ ಈ ಸಿನಿಮಾ ಎಲ್ಲರಿಗೂ ಇಷ್ಟವಾಗಿತ್ತು. ಚಿತ್ರದ ಮೇಕಿಂಗ್ ಬಗ್ಗೆ ಕೂಡಾ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ʻಮುಂದಿನ ನಿಲ್ದಾಣʼದಲ್ಲಿ ನಿರ್ದೇಶಕ ವಿನಯ್ ಭಾರದ್ವಾಜ್ ಅವರ ಕಲಾತ್ಮಕ ಕುಸುರಿಯ ಬಗ್ಗೆ ಮಾಧ್ಯಮಗಳು ಸೇರಿದಂತೆ ನೋಡಿದ ಎಲ್ಲರೂ ಹೊಗಳಿದ್ದರು. ಈಗ ʻಅಮೆಜ಼ಾನ್ ಪ್ರೈಂ ವಿಡಿಯೋದಲ್ಲಿʼ ಮುಂದಿನ ನಿಲ್ದಾಣ ಬಂದು ನಿಂತಿದೆ. ದಿನದಿಂದ ದಿನಕ್ಕೆ ಹೆಚ್ಚು ವೀಕ್ಷಕರನ್ನು ಪಡೆಯುತ್ತಿರುವ ಚಿತ್ರ ಇದಾಗಿದೆ. ಥೇಟರಿನಲ್ಲಿ ನೋಡದಿದ್ದವರು ಇಲ್ಲಾದರೂ ನೋಡಿ. ಮಿಸ್ ಮಾಡಿಕೊಳ್ಳಬೇಡಿ. ಪದೇ ಪದೇ ನೋಡಬೇಕು ಅನಿಸುವ ಸಿನಿಮಾ ಇದು..!