ಕನ್ನಡದ ಹೊಸ ತಲೆಮಾರಿನ ಕಥೆಗಾರ, ಅಂಕಣಕಾರ ಮತ್ತು ಇಂಗ್ಲಿಷ್ ಉಪನ್ಯಾಸಕರಾದ ಶಿವಕುಮಾರ ಮಾವಲಿ ಸಿನಿಮಾ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಡುವ ಪ್ರಯತ್ನ ಮಾಡಿದ್ದಾರೆ. ದೇವರು ಅರೆಸ್ಟ್ ಆದ, ಟೈಪಿಸ್ಟ್ ತಿರಸ್ಕರಿಸಿದ ಕಥೆ, ಸುಪಾರಿ ಕೊಲೆ ಎಂಬ ಪುಸ್ತಕಗಳಿಂದ ವಿಶೇಷವಾಗಿ ಗುರುತಿಸಿಕೊಂಡಿರುವ ಶಿವಕುಮಾರ್ ಈಗ ಪಾಪರ್ ಫಿಲಂಸ್ ನವರು ನಿರ್ಮಿಸಿರುವ ಮುತ್ತುರಾಜ ಎಂಬ ಕಿರುಚಿತ್ರಕ್ಕೆ ಬರೆದಿರುವ ‘ ಕಳೆದು ಹೋದ ನಿನ್ನೆಯನು ‘ ಎಂಬ ಹಾಡು ಯಟ್ಯೂಬ್ ನಲ್ಲಿ ಭಾನುವಾರ ರಿಲೀಸ್ ಆಗಿದೆ. ಈ ವೀಡಿಯೋ ಸಾಂಗ್ ನ ಚಿತ್ರೀಕರಣವೂ ವಿಶೇಷವಾಗಿದ್ದು ,ಮೂರು ನಿಮಿಷದ ಈ ಹಾಡಿನಲ್ಲಿ ಪ್ರತಿಯೊಂದು ಸಾಲುಗಳೂ ಮಾರ್ಮಿಕವಾಗಿವೆ.
‘ನೀರ ಮೇಲಿನ ಮರಳ ಮನೆಯಂತೆ ಒಲವು ಕಟ್ಟಿದ ನೆನಪು … ಕಟ್ಟುತ್ತಲೇ ಕೆಡಗುವುದು ಎಲ್ಲಾ ಒಲವ ರೂಪು… ವಿರಹವನು ಗೆದ್ದವನ ಸಾವು ಉಂಟೇನು? ಸಲುಗೆ ಇರದ ಸನಿಹ ಬಲು ದೂರ ‘ ಎಂಬ ಸಾಲುಗಳಲ್ಲಿ ಏನೋ ಹೊಸತನ್ನು ಹೇಳುವ ಹಾಗೆ ಕಾಣುತ್ತಿದ್ದಾರೆ. ನಾರಾಯಣ ಶರ್ಮ ಕಂಪೋಸ್ ಮಾಡಿ ಹಾಡಿರುವ ಈ ಹಾಡು ಭಾನುವಾರ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಮೂರು ನಿಮಿಷಗಳ ಹಾಡಾದರೂ ಫ್ರೆಷ್ ಅನ್ನಿಸುವ ಭಾವ ಮೂಡಿಸುತ್ತದೆ. ಈ ಹಿಂದೆ ಸಂಚಾರಿ ವಿಜಯ್ ಅವರ ನಟನೆಯಲ್ಲಿ ಮೂಡಿಬಂದ ಅವ್ಯಕ್ತ ಕಿರುಚಿತ್ರದಲ್ಲಿಯೂ ಮಾವಲಿ, ‘ ಹೆಣ್ಣಿನೊಲವ ಹಾದಿ ಹಿಡಿದು ‘ ಎಂಬ ಹಾಡು ವಿಶೇಷವಾಗಿತ್ತು.
ಈಗ ಕಳೆದು ಹೋದ ನಿನ್ನೆಯಲ್ಲಿ ಏನು ಹೇಳುತ್ತಿರಬಹುದು ಎಂಬ ಕುತೂಹಲ ತಣಿಸಿಕೊಳ್ಳಲು ಈ ಹಾಡು ನೋಡಿ … ಯೂಟ್ಯೂಬ್ಲಿಂಕ್ https://youtu.be/d6xu6e7Tr3U
No Comment! Be the first one.