ಕಾಮಿಡಿ ಕಿಲಾಡಿ ಸೀಜನ್ ಒಂದರ ವಿಜೇತ ಶಿವರಾಜ್ ಕೆ. ಆರ್. ಪೇಟೆ ನಾಯಕನಾಗಿ ನಟಿಸಿರುವ ಹೊಸ ಸಿನಿಮಾ ನಾನು ಮತ್ತು ಗುಂಡ. ಸಿನಿಮಾದ ಮೊದಲನೇ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇದರ ನಡುವೆ ಸಿನಿಮಾದ ಎರಡನೇ ಟೀಸರ್ ಇಂದು ಬಿಡುಗಡೆಯಾಗಲಿದೆ. ಸಿಂಬಾ ಹೆಸರಿನ ನಾಯಿಯ ಜೊತೆಗಿನ ಕಥೆಹೊಂದಿರುವ ಸಿನಿಮಾದಲ್ಲಿ ಶಿವರಾಜ್ ಕೆ . ಆರ್ ಪೇಟೆಗೆ ಸಂಯುಕ್ತ ಹೊರನಾಡು ಜೋಡಿಯಾಗಿದ್ದಾರೆ .
https://www.instagram.com/p/B0q5l3vHLa_/?utm_source=ig_web_copy_link
ಎಲ್ಲ ಅಂದುಕೊಂಡಂತಾದರೆ ಈ ಸಿನಿಮಾವನ್ನು ಆಗಸ್ಟ್ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಈ ಚಿತ್ರವನ್ನು ಶ್ರೀನಿವಾಸ ನಿರ್ದೇಶನ ಮಾಡಿದ್ದಾರೆ. ರಘು ಹಾಸನ್ ನಿರ್ಮಾಣ ಮಾಡಿದ್ದಾರೆ. ತಮ್ಮ ಎರಡನೇ ಟೀಸರ್ ಬಿಡುಗಡೆಯ ಕುರಿತು ಸ್ವತಃ ಶಿವರಾಜ್ ಕೆ. ಆರ್. ಪೇಟೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಮರೆಯೋಕೆ ಆಗದಿರುವ ಕಥೆಯಿದೆ.. ಎಲ್ಲಾ ಸೇರಿಕೊಂಡು ಒಂದೊಳ್ಳೆ ಸಿನಿಮಾ ಕೂಡ ಆಗಿದೆ. ಇಂದು ಸಂಜೆ ಟೀಸರ್-2 ಬರ್ತಿದೆ, ನೋಡಿ ಅಭಿಪ್ರಾಯ ತಿಳಿಸಿ. ಸಿನಿಮಾ ಕೂಡ ಆದಷ್ಟು ಬೇಗನೇ ಬರುತ್ತೆ.. ನಿಮ್ ಪ್ರೀತಿ ಹಾರೈಕೆ ಯಾವಾಗ್ಲು ಜೊತೆಗಿರಲಿ.. ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
No Comment! Be the first one.