ಟಾಲಿವುಡ್ ನ ನವನಟ ನವೀನ್ ಚಂದ್ರ ತಮಿಳಿನ ಸರಬಮ್, ಬ್ರಮ್ಮನ್ ಹಾಗೂ ತೆಲುಗಿನ ಚಿತ್ರಗಳಲ್ಲಿಯೂ ಅಭಿನಯಿಸಿ ತನ್ನದೇ ಆದ ಫ್ಯಾನ್ಸ್ ಫಾಲೋಯಿಂಗ್ ಸೃಷ್ಟಿಸಿಕೊಂಡವರು. ಸದ್ಯದ ಸುದ್ದಿ ಏನಪ್ಪ ಅಂದ್ರೆ ನಾಯಕನಾಗಿ ನಟಿಸುತ್ತಿದ್ದ ನವೀನ್ ಚಂದ್ರ, ಧನುಷ್ ಅಭಿನಯದ ಮುಂಬರುವ ಚಿತ್ರವೊಂದಕ್ಕೆ ನೆಗೆಟೀವ್ ಷೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರವನ್ನು ದುರಾಯ್ ಸೆಂತಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಈ ಕುರಿತು ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಈ ಚಿತ್ರವನ್ನು ಸತ್ಯಜ್ಯೋತಿ ಫಿಲಂ ಬ್ಯಾನರ್ ನಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಮೆರ್ವಿನ್ ಮತ್ತು ವಿವೇಕ್ ಸಂಗೀತ ಸಂಯೋಜನೆ ಮಾಡಲಿರುವುದು ವಿಶೇಷವಾಗಿದೆ. ಧನುಷ್ ಈಗಾಗಲೇ ಸೆಂತಿಲ್ ಕುಮಾರ್ ಜತೆಯಾಗಿ ಕೋಡಿ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ಚಿತ್ರದ ನಾಯಕಿ ಸ್ನೇಹ ಜತೆಯಾಗಿಯೂ ಪುದುಪೆಟ್ಟಾಯ್ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.