ಚಿತ್ರರಂಗಕ್ಕೆ ಬರಬೇಕು ಎಂಬ ಹೊಸ ಪ್ರತಿಭೆಗಳು ಮೊದಲು ಮುಖ ಮಾಡುವುದು ಕಿರುಚಿತ್ರ, ಆಲ್ಬಂಗಳತ್ತ. ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲು ಇವುಗಳು ಉತ್ತಮ ವೇದಿಕೆಯಾಗುತ್ತದೆ ಅಂಥ ನಂಬಿರುವವರು. ಇತ್ತೀಚೆಗೆ ಇದರ ಮೂಲಕವೆ ಗುರುತಿಸಿಕೊಂಡು, ಭರವಸೆ ಮೂಡಿಸಿ ಚಿತ್ರ ನಿರ್ದೇಶಕರಾಗುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ.  ಈ ಸಾಲಿಗೆ ’ಓ ಮೈ ಲವ್’ ವಿಡಿಯೋ ಹಾಡು ಸಿದ್ದಗೊಂಡಿದೆ. ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಜೀವನ್‌ಗಂಗಾಧರಯ್ಯ ಹಾಡಿಗೆ ಪರಿಕಲ್ಪನೆ,ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.

ಡ್ರಾಮಾ ಜ್ಯೂನಿಯರ‍್ಸ್ ಖ್ಯಾತಿಯ ತುಷಾರ್‌ಗೌಡ ನಾಯಕ. ಮಜಾಭಾರತ್‌ದಲ್ಲಿ ಕಾಣಿಸಿಕೊಂಡಿದ್ದ ಆರಾಧನಭಟ್‌ನಿಟ್ಟೋಡಿ ನಾಯಕಿ. ಸಂಗೀತ ಜಿತಿನ್‌ದರ್ಶನ್-ಸತ್ಯರಾಧಾಕೃಷ್ಣ, ಛಾಯಾಗ್ರಹಣ ರಾಜರಾವ್‌ಅಂಚಲ್‌ಕರ್, ಸಂಕಲನ ಅಕ್ಷಯ್.ಪಿ.ರಾವ್, ನೃತ್ಯ ತೀಚು ಆಚಾರ್ಯ ನಿರ್ವಹಿಸಿದ್ದಾರೆ. ಪ್ರಭಾಕರ್.ಬಿ.ಪಿ, ಶಂಕರಣ್ಣ ಸ್ಟುಡಿಯೋ ಹಾಗೂ ರಂಗಮಯೂರಿ ಜಂಟಿಯಾಗಿ ಬಂಡವಾಳ  ಹೂಡಿದ್ದಾರೆ.

ಗೀತೆಯ ಕುರಿತು ಹೇಳುವುದಾದರೆ, ನಮ್ಮ ಯೌವ್ವನದಲ್ಲಿ ಹೊಸತನ್ನು ಕಂಡುಕೊಳ್ಳುವ ಸಮಯದಲ್ಲಿ ಎದುರುಗೊಳ್ಳುವ ವಿವಿಧ ಸನ್ನಿವೇಶಗಳು ನೆನಪಿಸುತ್ತದೆ. ಆಧುನಿಕತೆಯ ಜೀವನದಲ್ಲಿ ಮಾನವ ಸಂಬಂದಗಳು ಪ್ರಧಾನ ಪಾತ್ರವಹಿಸುತ್ತವೆ. ವಿಶೇಷವಾಗಿ ಪೋಷಕರು ಮತ್ತು ಮಗುವಿನ ರಿಲೇಶನ್‌ಷಿಪ್‌ದಲ್ಲಿ  ಬದುಕಿನುದ್ದಕ್ಕೂ ಅನೇಕ ಕಹಿ ಮತ್ತು ಸಿಹಿ ಕ್ಷಣಗಳನ್ನು ಕಾಣುತ್ತೇವೆ.

ಇವಿಷ್ಟು ನಿರ್ದೇಶಕರು ಸಿನಿಮಾಕ್ಕಾಗಿ ಬರೆದ ಕತೆಯ ಒಂದು ಭಾಗದಲ್ಲಿ ಬರಲಿದೆ. ಮೊನ್ನೆಯಷ್ಟೇ ಪ್ರದರ್ಶನಗೊಂಡ ಹಾಡಿನ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ, ಗಾಯಕಿ ಅನುರಾಧಭಟ್, ಬೆಲ್‌ಬಾಟಂ ನಿರ್ಮಾಪಕ ಸಂತೋಷ್‌ಕುಮಾರ್, ಕೆಜಿಎಫ್‌ಗೆ ಸಂಭಾಷಣೆ ಬರೆದಿರುವ ಚಂದ್ರಮೌಳಿ, ನಟಿ ಪ್ರಿಯಾಂಕತಿಮ್ಮೇಶ್ ಮುಂತಾದವರು ಗೀತೆ ಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಚೆನ್ನೈನಲ್ಲಿ ನಡೆಯಿತು ರಹಸ್ಯ ಸಭೆ!!

Previous article

ಲೈಫ್ ಇಸ್ ಬ್ಯೂಟಿಫುಲ್ ಮೂಲಕ ಸಿಂಗರ್‌ ಆದರು ಪೃಥ್ವಿ ಅಂಬರ್!

Next article

You may also like

Comments

Leave a reply

Your email address will not be published. Required fields are marked *

More in cbn