ಥಿಯೇಟರ್ ನಲ್ಲಿ ಅಷ್ಟೇನೂ ಕಮಾಯಿ ಮಾಡದೇ ಒಂದು, ಎರಡು, ಮೂರೇ ದಿನಕ್ಕೆ ಥಿಯೇಟರ್ ನಿಂದ ಖಾಲಿಯಾದ ಸಾಕಷ್ಟು ಸಿನಿಮಾಗಳು ಸದ್ದಿಲ್ಲದೇ ಇತ್ತೀಚಿಗೆ ಹೆಚ್ಚು ಸುದ್ದಿಯಾಗುತ್ತಿದೆ. ಅಂದುಕೊಂಡಷ್ಟರ ಮಟ್ಟಿಗೆ ಆದಾಯ ಗಳಿಸದೇ ಹೋದರೂ ಸಹ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ, ವಿಮರ್ಶಕರಿಂದ ಒಳ್ಳೆಯ ಅಭಿಪ್ರಾಯವನ್ನು ಪಡೆದು ಸೈ ಎನ್ನಿಸಿಕೊಳ್ಳುತ್ತಿದೆ. ಅಂತಹುದೇ ಸಿನಿಮಾಗಳ ಪೈಕಿ ಸದ್ಯ ಒಂದಲ್ಲ ಎರಡಲ್ಲ ಚಿತ್ರ ರೇಸಿನಲ್ಲಿದೆ. ಕಳೆದ ವರ್ಷ ರಿಲೀಸ್ ಭಾಗ್ಯ ಕಂಡು ಪ್ರೇಕರಿಂದ ಹಾಗೂ ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಗಳಿಸಿದ್ದ ಈ ಸಿನಿಮಾ ಮತ್ತೊಂದು ಪ್ರಶಸ್ತಿಗೆ ಭಾಜನವಾಗಿದೆ.
ಕನ್ನಡದ ಅದ್ಬುತ ಸಿನಿಮಾಗಳಲ್ಲಿ ಒಂದಾದ ರಾಮ ರಾಮ ರೇ ನಿರ್ದೇಶಕ ಸತ್ಯ ಪ್ರಕಾಶ್ ನಿರ್ದೇಶನದ ಈ ಚಿತ್ರಕ್ಕೆ ಕ್ರಿಟಿಕ್ ಚಾಯ್ಸ್ ಫಿಲಂ ಅವಾರ್ಡ್ ದೊರೆತಿದೆ. ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ನಿನ್ನೆ ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಿರ್ದೇಶಕ ಸತ್ಯ ಪ್ರಕಾಶ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ದೇಶದ ವಿಮರ್ಶಕರ ಸೊಸೈಟಿಯಿಂದ ನೀಡಲ್ಪಡುವ ಸಿಸಿಎಫ್-ಎ ದಕ್ಷಿಣದ ಅತ್ಯುತ್ತಮ ಸಿನಿಮಾ ಎಂಬ ಅವಾರ್ಡ್ ಬಾಚಿಕೊಂಡಿದ್ದು, ಕನ್ನಡಿಗರ ಸಂತಸಕ್ಕೆ ಕಾರಣವಾಗಿದೆ. ಅತಿ ದೊಡ್ಡ ಸ್ಟಾರ್ ಕಾಸ್ಟ್, ಬಿಗ್ ಬಜೆಟ್ ಸಿನಿಮಾಗಳೇ ಹೇಳ ಹೆಸರಿಲ್ಲದೇ ಅಟ್ಟರ್ ಫ್ಲಾಪ್ ಆಗುತ್ತಿರುವ ಸಂದರ್ಭದಲ್ಲಿ ಇಂತಹ ಹೊಸ ಮುಖಗಳ ಸಿನಿಮಾಗಳು ಇಷ್ಟರಮಟ್ಟಿಗೆ ಯಶಸ್ಸು, ಕೀರ್ತಿ ಗಳಿಸುತ್ತಿರುವುದು ಸ್ಯಾಂಡಲ್ ವುಡ್ ನ ಮಂದಿ ಹೆಮ್ಮೆ ಪಡೆಯುವ ಸಂಗತಿಯಲ್ಲದೇ ಮತ್ತೇನು.
No Comment! Be the first one.