ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಬಿಡುಗಡೆಗೆ ವಾರ ಮಾತ್ರ ಉಳಿದಿದೆ. ಇದೀಗ ಈ ಚಿತ್ರದ ಅಫಿಷಿಯಲ್ ಟ್ರೈಲರ್ ಬಿಡುಗಡೆಯಾಗಿದೆ. ಆರೆಂಜಿಂನ ಅಸಲೀ ಸ್ವಾದದ ಅಂದಾಜು ಸಿಗುವಂತೆ ಹೊರ ಬಂದಿರೋ ಈ ಟ್ರೈಲರ್ ಈಗ ವ್ಯಾಪಕವಾಗಿ ಸದ್ದು ಮಾಡಲಾರಂಭಿಸಿದೆ.
ಅಷ್ಟಕ್ಕೂ ಈ ಟ್ರೈಲರ್ ಇದೇ ನವೆಂಬರ್ ತಿಂಗಳ ೨೪ರಂದೇ ಬಿಡುಗಡೆಯಾಗಬೇಕಿತ್ತು. ನಿರ್ದೇಶಕ ಪ್ರಶಾಂತ್ ರಾಜ್ ಉತ್ಸಾಹದಿಂದಲೇ ಅದಕ್ಕೆ ತಯಾರಿ ಮಾಡಿಕೊಂಡಿದ್ದರು. ಆದರೆ ಆಶ ದಿನವೇ ಮಂಡ್ಯದ ಕನಗನಮರಡಿಯಲ್ಲಿ ಬಸ್ ದುರಂತ ಸಂಭವಿಸಿತ್ತು. ಬಸ್ ನಾಲೆಗೆ ಉರುಳಿ ಹಲವಾರು ಜನ ಸತ್ತ ದುಃಖದಲ್ಲಿ ಟ್ರೈಲರ್ ಲಾಂಚಿನ ಸಂಭ್ರಮ ಪಡಲು ಮನಸಾಗದೇ ಮುಂದೂಡಲಾಗಿತ್ತು.
ಆದರೀಗ ಆ ದುರಂತ ಮತ್ತು ರೆಬೆಲ್ ಸ್ಟಾರ್ ನಿಧನದ ನೋವಿದ್ದರೂ, ಬಿಡುಗಡೆಗೆ ವಾರವಷ್ಟೇ ಬಾಕಿ ಉಳಿದಿರೋದರಿಂದ ಟ್ರೈಲರ್ ಅನಾವರಣಗೊಳಿಸಲಾಗಿದೆ. ಈ ಹಿಂದೆ ಝೂಮ್ ಚಿತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ಪ್ರಶಾಂತ್ ರಾಜ್ ಮತ್ತು ಗಣೇಶ್ ಜೋಡಿ ಆರೆಂಜ್ ಮೂಲಕವೂ ಅದನ್ನು ಮುಂದುವರೆಸೋ ಲಕ್ಷಣಗಳಿವೆ. ಈಗ ಹೊರ ಬಂದಿರೋ ಟ್ರೈಲರ್ ಅದರ ಮುನ್ಸೂಚನೆಯಂತಿದೆ!
#
No Comment! Be the first one.