ಓವಿಯಾ ಹುಟ್ಟು ಹಬ್ಬದ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ಓವಿಯಾ ಅಭಿಮಾನಿಗಳು ಶುಭಾಷಯ ಕೋರುವ ಜತೆಗೆ ಪಾರ್ಟಿಯನ್ನು ಸಹ ಕಮೆಂಟ್ ಬಾಕ್ಸ್ ನಲ್ಲಿ ಕೇಳುತ್ತಿದ್ದರು. ಹೀಗೆ ಚಾಟಿಂಗ್ ಮುಂದುವರೆದು ಓವಿಯಾ ಹಾಕಿದ್ದ ಫೋಟೋಗಳನ್ನು ಗಮನದಲ್ಲಿಟ್ಟುಕೊಂಡು ಆಕೆಯನ್ನು ಅವಮಾನ ಗೊಳಿಸುವ ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರಶ್ನೆ ಕೇಳಿದ್ದ ಟ್ರೋಲಿಗರೊಬ್ಬರು ಓವಿಯಾ ಒಬ್ಬಳು ಐಟಂ. ಹಾಗಿದ್ದಮೇಲೆ ಆಕೆ ಮದುವೆಯಾಗಿ ಏನು ಪ್ರಯೋಜನವೆಂದು ಕೇಳಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಓವಿಯಾ ನಿಮ್ಮಮ್ಮ ಐಟಂ ಎಂದು ಪ್ರತಿಕ್ರಿಯಿಸಿದ್ದಾರೆ. ಆಕೆ ಪ್ರತಿಕ್ರಿಯೆ ನೀಡುತ್ತಿದ್ದಂತೆ ಓವಿಯಾ ಅಭಿಮಾನಿಗಳು ತಮ್ಮದೇ ಭಾಷೆಗಳಲ್ಲಿ ಆ ಟ್ರೋಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.