ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಪಡ್ಡೆಹುಲಿ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ನಾನಾ ರೀತಿಯಲ್ಲಿ ಪಡ್ಡೆಹುಲಿ ಘರ್ಜಿಸಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಆಪ್ತ ವಲಯದಲ್ಲಿದ್ದ ಮಂಜು ಮಗನ ಚಿತ್ರದ ಮೂಲಕ ತಮ್ಮ ವಿಷ್ಣು ಅಭಿಮಾನವನ್ನ ಮತ್ತೆ ತೋರ್ಪಡಿಸಿದ್ದಾರೆ. ಪಡ್ಡೆಹುಲಿಯ ವಿಶೇಷವಾದೊಂದು ಹಾಡನ್ನ ವಿಷ್ಣುವರ್ಧನ್ ರಿಗೆ ಅರ್ಪಿಸಿರೋ ಮಂಜು, ಅವರ ಅಭಿಮಾನಿಗಳಿಗಾಗಿಯೇ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಿದ್ದಾರೆ.
ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಸಿನಿಮಾ ತಂಡ ಆರಂಭದಿಂದಲೂ ವಿಷ್ಣು ಅಭಿಮಾನದ ಪಥದಲ್ಲಿಯೇ ಸಾಗಿ ಬಂದಿದೆ. ಇದೀಗ ನಾಯಕನನ್ನು ಪರಿಚಯಿಸೋ ನಾ ತುಂಬಾ ಹೊಸಬ ಬಾಸು ಎಂಬ ಹಾಡನ್ನು ತಯಾರಿಸಿದೆ. ಫೆಬ್ರವರಿ೨ರಂದು ಮಧ್ಯಾಹ್ನ ೧೨ ಘಂಟೆಗೆ ಚಾಮರಾಜಪೇಟೆಯಲ್ಲಿರೋ ಕಲಾವಿದರ ಸಂಘದಲ್ಲಿ ವಿಷ್ಣು ಅಭಿಮಾನಿಗಳಿಗೆಂದೇ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಿದ್ದಾರೆ.
ಇದು ಮಂಜು ಅವರ ವಿಷ್ಣುವರ್ಧನ್ ಅವರಿಗೆ ಅರ್ಪಿಸಿರೋ ವಿಶೇಷವಾದ ಹಾಡು. ವಿಷ್ಣು ಅಭಿಮಾನಿಗಳಿಗೆ ಖುಷಿಯಾಗುವಂತೆ ಇದು ಮನೂಡಿ ಬಂದಿದೆ. ಸಾಹಸ ಸಿಂಹನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಡ್ಡೆಹುಲಿಯ ಹಾಡನ್ನು ವೀಕ್ಷಿಸಬೇಕೆಂದು ಕೆ ಮಂಜು ಕೇಳಿಕೊಂಡಿದ್ದಾರೆ.
ವಿಷ್ಣು ಅವರ ಆಪ್ತ ವಲಯದಲ್ಲಿದ್ದುಕೊಂಡು ಅವರನ್ನೇ ಗುರುವೆಂದುಕೊಂಡಿದ್ದವರು ಕೆ ಮಂಜು. ಈ ಹಿಂದೆ ಪಡ್ಡೆಹುಲಿ ಚಿತ್ರದ ಮೂಲಕವೇ ರ್ಯಾಪ್ ಶಾಐಲಿಯ ಹಾಡೊಂದರ ಮೂಲಕ ವಿಷ್ಣು ಅಭಿಮಾನ ಸಾರಲಾಗಿತ್ತು. ಅದರಲ್ಲಿ ಶ್ರೇಯಸ್ ನಾಗರಹಾವು ಚಿತ್ರದಲ್ಲಿನ ವಿಷ್ಣು ಗೆಟಪ್ಪಿನಲ್ಲಿ ಮಿಂಚಿದ್ದರು. ಈಗ ಅನಾವರಣಗೊಳ್ಳುತ್ತಿರೋ ಹಾಡು ಕೂಡಾ ಅದೇ ಸೊಗಸಿನೊಂದಿಗೆ ಮೂಡಿ ಬಂದಿದೆಯಂತೆ.
#
No Comment! Be the first one.