ಶ್ರೇಯಸ್ ನಾಯಕನಾಗಿ ಪದಾರ್ಪಣೆ ಮಾಡಿತ್ತಿರೋ ಪಡ್ಡೆಹುಲಿ ಚಿತ್ರವೀಗ ಪ್ರೇಕ್ಷಕರ ಆಸಕ್ತಿಯ ಕೇಂದ್ರದಲ್ಲಿದೆ. ಎಂ ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಹಾಡುಗಳ ಮೂಲಕ ಸೃಷ್ಟಿಸಿರೋ ಟ್ರೆಂಡ್ ಸಾಮಾನ್ಯದ್ದಲ್ಲ. ಹೀಗಿರುವಾಗಲೇ ಈ ಚಿತ್ರ ಮತ್ತೊಂದು ದಾಖಲೆಯ ರೂವಾರಿಯಾಗಿ ಬಿಟ್ಟಿದೆ!
ಯುಗಾದಿಯ ಶುಭ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿಯೇ ಮೈಲಿಗಲ್ಲಿನಂಥಾ ಪಡ್ಡೆಹುಲಿಯ ಸಾಧನೆಯನ್ನ ನಿರ್ದೇಶಕ ಗುರುದೇಶಪಾಂಡೆ ಜಾಹೀರು ಮಾಡಿದ್ದಾರೆ. ಈ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ೨.೩೬ ಕೋಟಿಗೆ ಮಾರಾಟವಾಗಿದೆ. ಇದನ್ನು ಎಸ್ಪಿಎಂ ಆರ್ಟ್ಸ್ ಎಲ್ ಎಲ್ ಬಿ ಎಂಬ ಚೆನೈ ಮೂಲದ ಸಂಸ್ಥೆ ಖರೀದಿಸಿದೆಯಂತೆ.
ಇಷ್ಟು ದೊಡ್ಡ ಮೊತ್ತಕ್ಕೆ ಹಿಂದಿ ಡಬ್ಬಿಂಗ್ ರೈಟ್ಸ್ ಮಾರಾಟವಾಗಿರೋದರಿಂದ ಇಡೀ ಚಿತ್ರತಂಡವೇ ಖುಷಿಗೊಂಡಿದೆ. ಸ್ಟಾರ್ ನಟರ ಚಿತ್ರಗಳ ಡಬ್ಬಿಂಗ್ ರೈಟ್ಸ್ ಆಗಾಗ ಹೀಗೆ ಭಾರೀ ಮೊತ್ತಕ್ಕೆ ಮಾರಾಟವಾಗೋದಿದೆ. ಆದರೆ ಹೊಸಾ ನಾಯಕನಿರೋ ಚಿತ್ರಗಳು ಪ್ರಯತ್ನ ಪಟ್ಟರೂ ಕೂಡಾ ಇಂಥಾ ಮಾರುಕಟ್ಟೆ ಸೃಷ್ಟಿಸಿಕೊಳ್ಳೋದು ಕಷ್ಟವಿದೆ. ಆದರೆ ಪಡ್ಡೆಹುಲಿ ಮಾತ್ರ ಅನಾಯಾಸವಾಗಿ ಸ್ಟಾರ್ ಚಿತ್ರಗಳಂಥಾದ್ದೇ ಖದರಿನಿಂದ ಮುಂದುವರೆಯುತ್ತಿದೆ.
ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳೋದಾದರೆ, ಹೊಸಾ ಹುಡುಗ ನಾಯಕನಾಗಿ ಎಂಟ್ರಿ ಕೊಟ್ಟಿರೋ ಚಿತ್ರಗಳ ಡಬ್ಬಿಂಗ್ ಹಕ್ಕು ಹೀಗೆ ಭಾರೀ ಮೊತ್ತಕ್ಕೆ ಮಾರಾಟವಾಗಿದ್ದಿಲ್ಲ. ಈ ವಿಚಾರದಲ್ಲಿಯೂ ಪಡ್ಡೆಹುಲಿಯೇ ಮೊದಲ ಸ್ಥಾನ ಕಾಯ್ದುಕೊಂಡಿದೆ.
No Comment! Be the first one.