ಈಗ ಪಡ್ಡೆಹುಲಿ ಚಿತ್ರದ ಹಾಡುಗಳ ಹವಾ ಚಾಲ್ತಿಯಲ್ಲಿದೆ. ಮೊನ್ನೆ ಬಿಡುಗಡೆಯಾಗಿದ್ದ ಹಾಡು ಲಕ್ಷಗಟ್ಟಲೆ ವೀಕ್ಷಣೆ ಪಡೆಯೋ ಮೂಲಕ ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ. ಇದೀಗ ಪ್ರೇಮಿಗಳ ದಿನಕ್ಕೆ ಸಮಸ್ತ ಪ್ರೇಮಿಗಳಿಗೂ ಸಾಥ್ ನೀಡುವಂಥಾ ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಹಾಡೊಂದನ್ನು ಅನಾವರಣಗೊಳಿಸಲು ತಯಾರಿ ನಡೆದಿದೆ!
ಈ ವಿಶೇಷವಾದ ಹಾಡನ್ನು ಇದೇ ಫೆಬ್ರವರಿ ಹನ್ನೊಂದರಂದು ಸಂಜೆ ಏಳು ಘಂಟೆಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ವೀಡಿಯೋ ಸಾಂಗಲ್ಲಿ ಪ್ರೇಮಿಗಳ ದಿನಕ್ಕೆ ಹೇಗೆ ತಯಾರಾಗಬೇಕೆಂಬ ಯಶಸ್ವೀ ಪ್ರೇಮಸೂತ್ರವಿದೆಯಂತೆ. ಇದನ್ನ ನೋಡಿ, ಕೇಳಿ ಹೊಸಾ ಹುಮ್ಮಸ್ಸಿನಿಂದ ಅಖಾಡಕ್ಕಿಳಿದರೆ ಪ್ರೇಮ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗ್ಯಾರಂಟಿ ಎಂಬ ಭರವಸೆಯನ್ನೂ ಚಿತ್ರತಂಡ ಕೊಟ್ಟಿದೆ!
ಗುರುದೇಶಪಾಂಡೆ ಈ ವರೆಗೆ ಬಿಡುಗಡೆಯಾಗಿರೋ ಎರಡು ಹಾಡುಗಳನ್ನೂ ಹಿಟ್ ಆಗುವಂತೆಯೇ ರೂಪಿಸಿದ್ದಾರೆ. ಇದೀಗ ಯುವ ಆವೇಗದ, ಪ್ರೀತಿ ತುಂಬಿರೋ ಹಾಡೊಂದನ್ನೂ ರೆಡಿ ಮಾಡಿದ್ದಾರೆ. ಇದು ಪಡ್ಡೆಹುಲಿಗೆ ಮತ್ತೊಂದು ದಿಕ್ಕಿನಲ್ಲಿ ಮೈಲೇಜು ನೀಡೋ ಲಕ್ಷಣಗಳೂ ಇದ್ದಾವೆ. ಪ್ರೇಮಿಗಳ ದಿನಕ್ಕೆ ಎರಡು ದಿನ ಮುಂಚಿತವಾಗಿಯೇ ಈ ಹಾಡು ಬಿಡುಗಡೆಯಾಗೋದರಿಂದ ಅದನ್ನು ನೋಡಿ, ಪ್ರೇಮಸೂತ್ರಗಳನ್ನ ಕರಗತ ಮಾಡಿಕೊಂಡು ಅಖಾಡಕ್ಕಿಳಿಯೋ ಸದಾವಕಾಶ ಪ್ರೇಮಿಗಳಿಗೆ ಸಿಕ್ಕಿದೆ!
#
No Comment! Be the first one.