ಹೊಂಗೇಮರದ ಮೂಲಕ ಶೃಂಗಾರದ ಹೂವನ್ನು ಬಿಡಿಸಿದ್ದ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ ಕಿರುತೆರೆಯಲ್ಲಿ ಚೊಚ್ಚಲ ಬಾರಿಗೆ ಪ್ರಸಾರವಾಗಲಿದೆ. ಸಿನಿಮಾದ ಪ್ರಸಾರದ ಹಕ್ಕನ್ನು ಜೀ ಕನ್ನಡ ವಾಹಿನಿ ತೆಗೆದುಕೊಂಡಿದ್ದು, ರಿಲೀಸ್ ಆದ ಮೂರೇ ತಿಂಗಳಿಗೆ ಟಿವಿಗೆ ಬರುತ್ತಿರುವುದು ವಿಶೇಷ. ಚಿತ್ರದ ಪ್ರೊಮೋವನ್ನು ಹಂಚಿಕೊಂಡಿದ್ದು, ಶೀಘ್ರದಲ್ಲಿಯೇ ಸಿನಿಮಾ ಪ್ರಸಾರ ಆಗಲಿದೆ.
ಯೋಗರಾಜ್ ಭಟ್ಟರ ಹೊಸ ಹುಡುಗರ ಜತೆಗೆ ಮೊಲ ಮತ್ತು ಆಮೆಯ ಕಥೆಯನ್ನು ಹೇಳಿದ್ದಾರೆ. ಪಕ್ಕಾ ಭಟ್ಟರ ಜಾನರ್ ನ ಸಿನಿಮಾ ಪಂಚತಂತ್ರ. ಹರಿಕೃಷ್ಣ ಹಾಡುಗಳು ಮಜಾ ಕೊಡುವಂತಿದ್ದವು. ಅನ್ಯ ರಾಷ್ಟ್ರಗಳಲ್ಲಿಯೂ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಥಿಯೇಟರ್ ನಲ್ಲಿ ನೋಡಲು ಮಿಸ್ ಮಾಡಿಕೊಂಡವರು ಮನೆಯಲ್ಲಿ ಕುಳಿತು ನೋಡಿ ಮಜಾ ಮಾಡಬಹುದು.
No Comment! Be the first one.