ಯಾವುದೇ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯೋದಾದರೆ ಅದ್ದೂರಿತನದತ್ತಲೇ ಗಮನ ಹರಿಸೋದು ಮಾಮೂಲು. ಆದರೆ ಪತಿಬೇಕು ಡಾಟ್ ಕಾಮ್ ಚಿತ್ರದ ನಿರ್ದೇಶಪಕ ರಾಕೇಶ್ ಮಾತ್ರ ಅತ್ಯಂತ ಭಿನ್ನವಾದ ಹಾದಿ ಹಿಡಿದಿದ್ದಾರೆ. ಜನಸಾಮಾನ್ಯರ ನಡುವೆ ಯಾವುದೇ ಅದ್ದೂರಿತನವಿಲ್ಲದೆ ಈ ಚಿತ್ರದ ವೀಡಿಯೋ ಸಾಂಗ್ ಒಂದನ್ನು ಲಾಂಚ್ ಮಾಡೋ ಆಲೋಚನೆ ರಾಕೇಶ್ ಅವರದ್ದು. ಈ ಸಂಬಂಧವಾಗಿ ರಾಕೇಶ್ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬರೆದಿರೋ ಒಂದು ಪತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ!
ರಾಕೇಶ್ ಸರಳವಾಗಿ ವೀಡಿಯೋ ಸಾಂಗು ಲಾಂಚ್ ಮಾಡೋ ಆಲೋಚನೆ ಮಾಡಿರೋದಕ್ಕೂ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ಏನು ಸಂಬಂಧ ಅನ್ನಿಸೋದು ಸಹಜ. ಆದರೆ ರಾಕೇಶ್ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿಯೇ ಮಾಡಲು ತೀರ್ಮಾನಿಸಿದ್ದಾರೆ. ಅದಕ್ಕೆ ಅನುವು ಮಾಡಿಕೊಡಬೇಕೆಂದು ಕೋರಿ ಸಿಎಂಗೆ ಒಂದು ಪತ್ರ ಬರೆದಿದ್ದಾರೆ. ಈಗ ವೈರಲ್ ಆಗಿರೋದು ಅದೇ ಪತ್ರ!
‘ನಾನು ನಿರ್ದೇಶಕ ಅನ್ನೋದಕ್ಕಿಂತ ಹೆಚ್ಚಾಗಿ ನಿಮ್ಮ ಅಭಿಮಾನಿ ಎನ್ನುವುದು ನನಗೆ ಅತ್ಯಂತ ಹೆಮ್ಮೆಯ ವಿಚಾರ. ನಾನು ನಿರ್ದೇಶಿಸಿರುವ ಜೈ ಮಾರುತಿ ಪಿಚ್ಚರ‍್ಸ್ ಅಡಿಯಲ್ಲಿ ತಯಾರಾಗಿರುವ ಪತಿಬೇಕು ಡಾಟ್ ಕಾಮ್ ಚಿತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವಂತಿದೆ. ಮಧ್ಯಮವರ್ಗದ ಕುಟುಂಬದ ಕಥೆ ಹೊಂದಿರೋ ಈ ಚಿತ್ರದ ಕಥೆ ಬದುಕಿಗೆ ಹತ್ತಿರಾಗಿದೆ. ಉತ್ತಮ ಸಂದೇಶವನ್ನೂ ಸಾರುವಂತಿದೆ. ಈ ಚಿತ್ರದ ವೀಡಿಯೋ ಸಾಂಗನ್ನು ಜನತಾದರ್ಶನದಲ್ಲಿ ಸರತಿಯ ಸಾಲಿನಲ್ಲಿ ನಿಂತು ನಿಮ್ಮಿಂದಲೇ ಬಿಡುಗಡೆ ಮಾಡಿಸಬೇಕೆಂಬ ಆಸೆ ನನ್ನದು. ಅದಕ್ಕೆ ಅನುವು ಮಾಡಿಕೊಡಬೇಕು ಎಂಬ ಅರಿಕೆ ಮಾಡಿಕೊಂಡಿರೋ ಈ ಪತ್ರವೀಗ ಎಲ್ಲಡೆ ಹರಿದಾಡುತ್ತಿದೆ.
ಇದಕ್ಕೆ ಕುಮಾರಸ್ವಾಮಿಯವರು ಒಪ್ಪಿಗೆ ಸೂಚಿಸಿ, ಅದು ಸಾಧ್ಯವಾದರೆ ರಾಕೇಶ್ ಅವರದ್ದೊಂದು ಹೊಸಾ ಪ್ರಯತ್ನವಾಗಿ ದಾಖಲಾಗುತ್ತವೆ.
#