ಇಂದು ಖುಷಿ ಖುಷಿಯಾಗಿ ನಿಂತು ಹಸೆಮಣೆ ಏರಿ ಮದುವೆಯಾದವರು ದಿನ ಕಳೆಯುವಷ್ಟರಲ್ಲಿ ಕೋರ್ಟ್ ಮೆಟ್ಟಿಲೇರುವ ಮಟ್ಟಿಗೆ ಮದುವೆ, ದಾಂಪತ್ಯ ಅನ್ನೋದು ಕಾಮನ್ನಾಗಿರೋದು ದುರ್ದೈವ. ಅದರಲ್ಲೂ ಸಿನಿಮಾ ಮಂದಿಗೆ ಇದು ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಹಾಗಂತ ಎಲ್ಲರೂ ಅದೇ ಕೆಟಗರೀಗೆ ಸೇರೋಲ್ಲ ಬಿಡಿ. ಹೃದಯದಿಂದ ಮದುವೆಯಾಗಿ ಇಂದು ಸುಖ ಸಂಸಾರ ನಡೆಸುತ್ತಿರುವ ಸಿನಿ ತಾರೆಗಳೂ ಇದ್ದಾರೆ.
ವಿಷ್ಯ ಏನಪ್ಪಾ ಅಂದ್ರೆ ಕಳೆದ ವಾರವಷ್ಟೇ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಫ್ಯಾಮಿಲಿಯೊಂದಿಗೆ ದಕ್ಷಿಣ ಪ್ಲೋರಿಡಾದ ಮಿಯಾಮಿ ಬೀಚ್ ನಲ್ಲಿ ಮಜಾ ಮಾಡ್ತಿದ್ದ, ಬಾಲಿವುಡ್ ತಾರೆ ಪ್ರಿಯಾಂಕ ಚೋಪ್ರಾ ದಾಂಪತ್ಯದಲ್ಲಿ ಬಿರುಕು ಮೂಡಿದೆಯಂತೆ. ಕೆಲ ತಿಂಗಳುಗಳ ಹಿಂದಷ್ಟೇ ಹಸೆ ಮಣೆ ಏರಿದ್ದ ಬಾಲಿವುಡ್ ನ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಮತ್ತು ಹಾಲಿವುಡ್ ನ ಪ್ರಸಿದ್ಧ ಗಾಯಕ ನಿಕ್ ಜೋನಾಸ್ ಸಾಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಇಬ್ಬರೂ ಡಿವೋರ್ಸ್ ಗೆ ಮುಂದಾಗಿದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.
ಮದುವೆಯಾದಂದಿನಿಂದಲೂ ಕೆಲಸ, ಪಾರ್ಟಿ ಸೇರಿದಂತೆ ಪ್ರತಿಯೊಂದು ವಿಚಾರಗಳಲ್ಲಿಯೂ ಇಬ್ಬರೂ ಕಿರಿಕ್ ಮಾಡಿಕೊಳ್ಳುತ್ತಿದ್ದರು ಎಂದು ಬ್ರಿಟಿಷ್ ಅಂತರಾಷ್ಟ್ರೀಯ ನಿಯತಕಾಲಿಕೆ ಓಕೆ ವರದಿ ಮಾಡಿದೆ. ಪಿಗ್ಗಿ-ನಿಕ್ ಗೆ ಕೋಪ ಬರುವಷ್ಟರ ಮಟ್ಟಿಗೆ ಬಿಹೇವ್ ಮಾಡುತ್ತಿದ್ದು, ಜವಾಬ್ದಾರಿಯಿಲ್ಲದೇ ಯಾವಾಗಲೂ ನವ ತರುಣಿಯಂತೆ ಪಬ್ಬು, ಎಂಜಾಯ್ ಮೆಂಟ್, ಪಾರ್ಟಿ ಮೂಡ್ ನಲ್ಲಿಯೇ ಕಾಲ ಕಳೆಯುತ್ತಿದ್ದಾರಂತೆ. ಇಬ್ಬರೂ ಅರ್ಥ ಮಾಡಿಕೊಳ್ಳದೇ ಮದುವೆಯಾಗಿದ್ದು, ಅವರ ಸಾಂಸಾರಿಕ ಜೀವನ ಹೊಂದಾಣಿಕೆಯಾಗುತ್ತಿಲ್ಲದ ಕಾರಣದಿಂದ ನಿಕ್ ಫ್ಯಾಮಿಲಿ ಡಿವೋರ್ಸ್ ಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಸಲಿಗೆ ಪ್ರಿಯಾಂಕ ಚೋಪ್ರಾ ಆಪ್ತ ವಲಯವನ್ನು ವಿಚಾರಿಸಿದಾಗ ಇದು ಗಾಳಿ ಸುದ್ದಿ, ಶುದ್ಧ ಸುಳ್ಳು ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಓಕೆ ನಿಯತಕಾಲಿಕೆ ಸುಳ್ಳು ವರದಿಯನ್ನು ಪ್ರಕಟಿಸಿದೆ ಎಂದೂ ತಿಳಿಸಿದ್ದಾರೆ. ಆದರೆ ಯಾವುದು ಸುಳ್ಳು ಯಾವುದು ಸತ್ಯ ಎಂಬ ಗೊಂದಲ ಪಿಗ್ಗಿ-ನಿಕ್ ಅಭಿಮಾನಿಗಳಲ್ಲಿದ್ದು, ಏನಾಗುತ್ತೋ ಕಾದು ನೋಡ್ಬೇಕು..
No Comment! Be the first one.