ಕಾದಂಬರಿ ಆಧಾರಿತ ಸಿನಿಮಾಗಳಿಗೆ ಹೆಚ್ಚು ಫೋಕಸ್ ಮಾಡುತ್ತಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಟಿಸಬೇಕೆಂಬ ಕನಸಿತ್ತಂತೆ. ಆದರೆ ಆ ಕನಸು ಈಡೇರುವ ಮುನ್ನವೇ ಅಗಲಿದ ತಾಯಿಯ ಆಸೆಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀರಿಸಲಿದ್ದಾರೆ.
ಯೆಸ್.. ಪುನೀತ್ ರಾಜ್ ಕುಮಾರ್ ಮುಂದಿನ ದಿನಗಳಲ್ಲಿ ಕಾದಂಬರಿಯಾಧಾರಿತ ಚಿತ್ರವನ್ನು ನಿರ್ಮಾಣ ಮಾಡುವ ಜತೆಗೆ ಸ್ವತಃ ಅವರೇ ನಾಯಕನಾಗಿ ಅಭಿನಯವನ್ನೂ ಮಾಡಲಿದ್ದಾರೆ. ವಿಶೇಷವೆಂದರೆ ಕುಂ. ವೀರಭದ್ರಪ್ಪನವರ ಕನಕಾಂಗಿ ಕಲ್ಯಾಣ ಎಂಬ ಕಾದಂಬರಿಯನ್ನು ಮೆಚ್ಚಿದ್ದ ಪಾರ್ವತಮ್ಮ ರಾಜ್ ಕುಮಾರ್ ದುನಿಯಾ ಸೂರಿ ಜತೆಗೆ ಮಾತುಕತೆಯನ್ನು ನಡೆಸಿದ್ದರಂತೆ. ಆದರೆ ಕಥೆಯ ಅಗಾಧತೆ ಸೂರಿಯನ್ನು ಸಿನಿಮಾದಿಂದ ಹಿಂದೆ ಸರಿಯುವಂತೆ ಮಾಡಲಾಗಿತ್ತಂತೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಅದೇ ಕಾದಂಬರಿಯನ್ನು ಕೈಗೆತ್ತಿಕೊಂಡಿದ್ದು, ಪೈಲ್ವಾನ್ ನಿರ್ದೇಶಕ ಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆಂಬ ಸುದ್ದಿ ಕೇಳಿಬರುತ್ತಿದೆ. ಪೈಲ್ವಾನ್ ರಿಲೀಸ್ ಬಳಿಕ ಜತೆಗೆ ಯುವರತ್ನ ಸಿನಿಮಾ ಮುಗಿದ ನಂತರ ಹೆಬ್ಬುಲಿ ಕೃಷ್ಣ ಮತ್ತು ಪವರ್ ಸ್ಟಾರ್ ಒಂದಾಗಲಿದ್ದು, ಕನಕಾಂಗಿ ಕಲ್ಯಾಣಕ್ಕೆ ಸಿನಿಮಾ ರೂಪ ಕೊಡಲಿರುವುದು ಕನ್ ಫರ್ಮ್ ಆಗಿದೆ. ಯಾವುದಕ್ಕೂ ಕಾದು ನೋಡ್ಬೇಕು.