ಬಾಹುಬಲಿ ಚಿತ್ರದಲ್ಲಿ ನಟಿಸಿ ಸಾಕಷ್ಟು ಹೈಪ್ ಸೃಷ್ಟಿಸಿದ್ದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ಮದುವೆಯಾಗುತ್ತಿದ್ದಾರೆ. ಅಮೆರಿಕಾದಲ್ಲಿ ಮನೆ ಖರೀದಿಸಿ ಅಲ್ಲೇ ಸೆಟಲ್ ಆಗಿದ್ದಾರೆ ಎನ್ನುವ ಗುಸು ಗುಸು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಬಾಹುಬಲಿ ಟೀಮ್ ಅಮೆರಿಕಾಕ್ಕೆ ತೆರಳಿದ್ದು ಸಾಕಷ್ಟು ಅನುಮಾನಗಳೀಗೂ ಕಾರಣವಾಗಿತ್ತು. ಆದರೆ ಈ ವಿಚಾರವನ್ನು ಪ್ರಭಾಸ್ ಸಾರಸಗಟಾಗಿ ತಿರಸ್ಕರಿಸಿದ್ದು, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ಅಭಿಮಾನಿಗಳ ಕನಸಿಗೆ ತಣ್ಣೀರೆರಚಿದ್ದಾರೆ.
ಸಾಹೋ ಚಿತ್ರದ ಪ್ರಮೋಷನ್ ಗಾಗಿ ಮುಂಬೈನಲ್ಲಿ ಮಾಧ್ಯಮ ಸ್ನೇಹಿತರ ಜತೆ ಮಾತನಾಡಿರುವ ಪ್ರಭಾಸ್ “ನಾನು ಮತ್ತು ಅನುಷ್ಕಾ ಶೆಟ್ಟಿ ತುಂಬಾ ಒಳ್ಳೆ ಸ್ನೇಹಿತರು ಯಾವ ಗಾಳಿಸುದ್ದಿಗೂ ಕಿವಿಕೊಡಬೇಡಿ. ಬಾಹುಬಲಿ ಸಿನಿಮಾ ಮುಗಿದ ಬಳಿಕ ನಾನು ಅನುಷ್ಕಾರನ್ನು ಭೇಟಿಯಾಗಲೇ ಇಲ್ಲ. ಹಾಗಾದರೆ ನಾವಿಬ್ಬರೂ ಜೊತೆಯಲ್ಲೇ ಕಾಣಿಸಕೊಳ್ಳಬೇಕಾಗಿತ್ತಲ್ಲವೇ? ನಾವಿಬ್ಬರೂ ಭೇಟಿಯಾಗಿಯೇ ಎರಡು ವರ್ಷಗಳಾಗಿವೆ. ಈ ಬಗ್ಗೆ ಕರಣ್ ಜೋಹರ್ ಕೂಡ ಕೇಳಿದ್ದರು. ಆಗ ರಾಣಾ, ರಾಜಮೌಳಿಯವರೇ ನಮ್ಮಿಬ್ಬರ ಮಧ್ಯೆ ಏನು ಇಲ್ಲವೆಂದು ತಿಳಿಸಿದ್ದಾರೆ. ಮದುವೆಯಾಗುತ್ತೇವೆ ಎಂಬುದು ಸತ್ಯಕ್ಕೆ ದೂರವಾದ ಮಾತು” ಎಂದು ಹೇಳಿದ್ದಾರೆ.