ಬಾಹುಬಲಿ ಸಿನಿಮಾದ ಮೂಲಕ ನಿದ್ರೆಗಣ್ಣಿನಲ್ಲಿದ್ದ ಭಾರತೀಯ ಚಿತ್ರರಂಗವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ ರಾಜಮೌಳಿ, ಹಾಗೂ ಆ ಚಿತ್ರದಲ್ಲಿ ಅಮೋಘ ನಟನೆಯನ್ನು ತೋರಿಸಿದ ಪ್ರಭಾಸ್ ಅವರನ್ನು ಭಾರತೀಯ ಸಿನಿಮಾ ಕ್ಷೇತ್ರದ ಸದ್ಯದ ಧೃವತಾರೆಗಳೆಂದರೆ ತಪ್ಪಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಸಿನಿ ತಾರೆಯರು ತಮ್ಮನ್ನು ತೊಡಗಿಸಿಕೊಂಡು ತಮ್ಮ ಚಿತ್ರದ ಲೇಟೆಸ್ಟ್ ಅಪ್ ಡೇಟ್ ಗಳನ್ನು, ಅಭಿಮಾನಿಗಳೊಂದಿಗೆ ಸಂವಾದಗಳನ್ನು ನಡೆಸುವುದು ಇತ್ತೀಚಿಗೆ ಹೆಚ್ಚಾಗುತ್ತಲೇ ಇದೆ. ಈ ವಿಚಾರದಲ್ಲಿ ಕೊಂಚ ಖಾಸಗಿ ವ್ಯಕ್ತಿಯಾಗಿ ದೂರ ಉಳಿದಿದ್ದ ಪ್ರಭಾಸ್ ಸದ್ಯ ಅದೇ ದಾರಿಯಲ್ಲಿದ್ದು, ಪ್ರಭಾಸ್ ಇನ್ ಸ್ಟಾ ಗ್ರಾಂ ಗೆ ಲಗ್ಗೆ ಇಟ್ಟಿದ್ದಾರೆ.
ಹೌದು, ಪ್ರಭಾಸ್ ಇನ್ ಸ್ಟಾ ಗ್ರಾಂ ನಲ್ಲಿ ಖಾತೆಯೊಂದನ್ನು ತೆರೆದಿದ್ದು, ತನ್ನ ಖಾತೆಗೆ ಪ್ರೊಫೈಲ್ ಫೋಟೋ ಆಗಲಿ, ಯಾವುದೇ ವಿವರಗಳನ್ನಾಗಲಿ ಪೋಸ್ಟ್ ಮಾಡಿಲ್ಲ. ಸಾಕಷ್ಟು ಖಾಸಗಿ ವ್ಯಕ್ತಿಯಾಗಿದ್ದ ಪ್ರಭಾಸ್ ಅವರು ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು ಮತ್ತು ಅವರ ತಂಡ ಇನ್ಸ್ಟಾಗ್ರಾಂ ಸೇರ್ಪಡೆಗೊಳ್ಳಲು ಕೇಳಿಕೊಂಡಿದ್ದಾರೆ. ಇದರಲ್ಲಿ ಈಗಾಗಲೇ 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಯಾವುದೇ ಪೋಸ್ಟ್ ಮಾಡದೆ ಪಡೆದುಕೊಂಡಿದ್ದಾರೆ. ಇದು ಅತೀ ಅಪರೂಪದ ದಾಖಲೆಯಾಗಿದೆ. ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದ ಯಾವುದೇ ಪ್ರಸಿದ್ಧ ವ್ಯಕ್ತಿ ಈವರೆಗೂ ಇಷ್ಟು ಫಾಲೋವರ್ಸ್ ನನ್ನು ಏಕಕಾಲಕ್ಕೆ ಪಡೆಯಲಿಲ್ಲ. ಪ್ರಭಾಸ್ ಫೇಸ್ಬುಕ್ ಪುಟವು 10 ಮಿ ಫಾಲೋವರ್ಸ್ ಹೊಂದಿದ್ದಾರೆ.
No Comment! Be the first one.