ಬಾಲಿವುಡ್ ನೃತ್ಯ ಸಂಯೋಜಕ ಪ್ರಭು ದೇವ್ ತಾವು ನಿರ್ದೇಶಿಸಲಿರುವ ‘ಸ್ಟ್ರೀಟ್ ಡಾನ್ಸರ್’ ಸಿನಿಮಾದಲ್ಲಿ ಮತ್ತೊಮ್ಮೆ ‘ಮುಕ್ಕಾಲಾ ಮುಕಾಬುಲಾ’ ಹಾಡನ್ನು ರಿಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ. ಹೌದು 1994ರಲ್ಲಿ ಕಾದಲನ್ ತಮಿಳು ಸಿನಿಮಾದಲ್ಲಿದ್ದ ಈ ಹಾಡನ್ನು ನಂತರ ಹಿಂದಿಯ ‘ಹಮ್ಸೇ ಹೈ ಮುಕಾಬುಲಾ’ ಚಿತ್ರದಲ್ಲಿಯೂ ಬಳಸಿಕೊಳ್ಳಲಾಗಿತ್ತು. ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದರು.
ಸದ್ಯ ಮತ್ತೊಮ್ಮೆ ಸ್ಟ್ರೀಟ್ ಡಾನ್ಸರ್ ನಲ್ಲಿಯೂ ಈ ಹಾಡನ್ನು ರೀ ಕ್ರಿಯೇಟ್ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಮಾತನಾಡಿರುವ ನಿರ್ಮಾಪಕ ಭೂಷಣ್ ಕುಮಾರ್, ಚಿತ್ರದಲ್ಲಿ ಪ್ರಭುದೇವ್ ಅವರು ನೃತ್ಯ ಮಾಡುವ ಸಂದರ್ಭದಲ್ಲಿ ಈ ಹಾಡನ್ನು ಮತ್ತೊಮ್ಮೆ ರಿಕ್ರಿಯೇಟ್ ಮಾಡುವ ಅಗತ್ಯವಿತ್ತು. ಆ ಕಾರಣಕ್ಕಾಗಿ ಮತ್ತೊಮ್ಮೆ ಹಾಡನ್ನು ಬಳಸಿಕೊಳ್ಳಲಾಗಿದ್ದು, ಈ ಹಾಡಿಗೂ ಮೊದಲಿನ ಹಾಡಿನಷ್ಟೇ ಮಹತ್ವ ದೊರೆಯಲಿದೆ ಎಂದಿದ್ದಾರೆ.
4 Comments