ಬಾಲಿವುಡ್ ನ ಯಶಸ್ವಿ ಹಾಗೂ ಬೇಡಿಕೆ ನಟಿಮಣಿಗಳ ಪೈಕಿ ಆಲಿಯಾ ಭಟ್ ಕೂಡ ಒಬ್ಬರು. ಸಾಕಷ್ಟು ಹಿಟ್ ಸಿನಿಮಾಗಳ ಮೂಲಕವೇ ಬಿ ಟೌನ್ ನಲ್ಲಿ ನೆಲೆ ಕಂಡುಕೊಂಡಿರುವ ಆಲಿಯಾ ಸದ್ಯ ಪ್ರದ ಎಂಬ ವಿಡಿಯೋ ಮೂಲಕ ಮೋಡಿ ಮಾಡಿದ್ದಾರೆ. ಯೆಸ್.. ಇತ್ತೀಚಿಗೆ ಬಿಡುಗಡೆಯಾದ ಈ ಹಾಡನ್ನು ಆಲಿಯಾ ಭಟ್ ಅಭಿಮಾನಿಗಳು ಸ್ವಾಗತಿಸಿದ್ದು, ಸಾಕಷ್ಟು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ದಿ ದೂರ್ಬಿನ್ ಮತ್ತು ಶ್ರೇಯಾ ಶರ್ಮ ಹಾಡಿರುವ ಈ ವಿಡಿಯೋ ಸಾಂಗನ್ನು ಜಸ್ಟ್ ಮ್ಯೂಸಿಕ್ ಸಂಸ್ಥೆ ನಿರ್ಮಾಣ ಮಾಡಿದೆ. ಹಾಗೂ ಬಾಸ್ಕೋ ಮಾರ್ಟಿಸ್ ಈ ಹಾಡಿಗೆ ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ದಿ ದೂರ್ಬಿನ್ ಅವರೇ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಪಂಜಾಬ್ ನ ಹಳೆ ಕ್ಲಾಸಿಕ್ ಸಾಂಗಿಗೆ ಹೊಸ ಸ್ಪರ್ಶ ನೀಡಿರುವ ಹಾಡು ಇದಾಗಿದ್ದು, ಆಲಿಯಾ ಭಟ್ ಡಿ ಗ್ಲಾಮ್ ಲುಕ್ಕಿಗೆ ಫಿದಾ ಆಗಿದ್ದಾರೆ. ಇನ್ನೂ ಕೆಲವರು ಈ ಹಾಡನ್ನು ಮರು ಸಂಯೋಜನೆ ಮಾಡುವ ಅಗತ್ಯವೇನಿತ್ತು ಎಂದೂ ಪ್ರಶ್ನಿಸಿದ್ದಾರೆ. ಇನ್ನು ಆಲಿಯಾ ಭಟ್ ಸಿನಿಮಾ ಕೆಲಸಗಳಲ್ಲಿಯೂ ಸಾಕಷ್ಟು ಬ್ಯುಸಿಯಾಗಿದ್ದು, ರಣಬೀರ್ ಕಪೂರ್ ಜತೆ ನಟಿಸಿರುವ ಬ್ರಹ್ಮಾಸ್ತ್ರ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.