ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಪಿಸಿ ಶೇಖರ್ ಮತ್ತೊಮ್ಮೆ ಜತೆಯಾಗುತ್ತಿದ್ದಾರೆ. ಈ ಹಿಂದೆ ಅರ್ಜುನ ಸಿನಿಮಾ ಮಾಡಿದ್ದ ಈ ಜೋಡಿ ಬರೋಬ್ಬರಿ ನಾಲ್ಕು ವರ್ಷದ ನಂತರ ಒಟ್ಟಿಗೆ ಬರುತ್ತಿದ್ದಾರೆ. ಮುಂದಿನ ತಿಂಗಳು ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬವಿದ್ದು, ಅದೇ ದಿನ ಅಧಿಕೃತವಾಗಿ ಹೊಸ ಪ್ರಾಜೆಕ್ಟ್ ಘೋಷಣೆಯಾಗಲಿದೆ.
ಚಿತ್ರದಲ್ಲಿ ಪ್ರಜ್ವಲ್ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ. ಸದ್ಯ ಪ್ರಜ್ವಲ್ ದೇವರಾಜ್ ಇನ್ಸ್ ಪೆಕ್ಟರ್ ವಿಕ್ರಂ, ಜಂಡಲ್ ಮ್ಯಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಅರ್ಜುನ್ ಗೌಡ, ಯದಾ ಯದಾ ಹೇ ಧರ್ಮಸ್ಯ, ರುಧೀರಾ ಸಿನಿಮಾಗಳಲ್ಲಿ ನಟಿಸಲಿದ್ದಾರೆ.
No Comment! Be the first one.