ಸ್ಯಾಂಡಲ್ ವುಡ್ ನಲ್ಲಿ ರೊಮ್ಯಾಂಟಿಕ್ ಹೀರೋ ಎಂದು ಜಮಾನದಲ್ಲಿಯೇ ಗುರುತಿಸಿಕೊಂಡ ನಟ ಕ್ರೇಜಿಸ್ಟಾರ್ ರವಿಚಂದ್ರನ್. ಅಭಿನಯಿಸಿದ ಬಹುತೇಕ ಚಿತ್ರಗಳೆಲ್ಲದರಲ್ಲಿಯೂ ಒಂದಿಲ್ಲೊಂದು ರೊಮ್ಯಾನ್ಸ್ ಸೀನುಗಳ ಅನುಭವವನ್ನು ಪಡೆದಿರುವ ರವಿಮಾಮನ ಮಗ ಮನೋರಂಜನ್ ರವಿಚಂದ್ರನ್ ಕೂಡ ಲಿಪ್ ಪಾಕ್ ಸೀನ್ ನಲ್ಲಿ ನಟಿಸಿದ್ದಾರೆ.
ಯೆಸ್.. ಮನೋರಂಜನ್ ಮತ್ತು ಕೀರ್ತಿ ಕಲಕೇರಿ ಅಭಿನಯದ ಪ್ರಾರಂಭ ಚಿತ್ರದಲ್ಲಿ ಕೆಲವು ಕಿಸ್ಸಿಂಗ್ ದೃಶ್ಯಗಳಿದ್ದು, ಮೊದಲು ಇಂತಹ ದೃಶ್ಯಗಳಲ್ಲಿ ನಟಿಸಲು ಥಿಂಕ್ ಮಾಡಿದ್ದ ಮನೋರಂಜನ್ ಬಳಿಕ ಚಿತ್ರಕ್ಕೆ ಅಗತ್ಯವಿರುವುದರಿಂದ ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗಷ್ಟೇ ಪ್ರಾರಂಭ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಲ್ಲಿಯೂ ಮನೋರಂಜನ್ ಮತ್ತು ಕೀರ್ತಿ ಕಲಕೇರಿ ಕಿಸ್ಸಿಂಗ್ ಝಲಕ್ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ. ವಿಶೇಷವೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಟೀಸರ್ ಗೆ ಧ್ವನಿ ನೀಡಿದ್ಧಾರೆ.
ಪ್ರಾರಂಭ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶನ ಮಾಡಿದ್ದು,ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಅಡಿಯಲ್ಲಿ ಜಗದೀಶ್ ಕಲ್ಯಾಡಿ ಚಿತ್ರಕ್ಕೆ ಬಂಡವಾಳ ಹೂಡಿದ್ಧಾರೆ. ಉಳಿದಂತೆ ಪ್ರಜ್ವಲ್ ಪೈ ಸಂಗೀತ, ಥ್ರಿಲ್ಲರ್ ಮಂಜು ಮತ್ತು ವಿಕ್ರಂ ಮೋರ್ ಸಾಹಸ ನಿರ್ದೇಶನ, ಸುರೇಶ್ ಬಾಬು ಛಾಯಾಗ್ರಹಣ, ವಿಜಯ್ ಕುಮಾರ್ ಸಂಕಲನ, ಸಂತು, ಗೀತಾ ನೃತ್ಯ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನು ತಾರಾಗಣದಲ್ಲಿ ಮನೋರಂಜನ್, ಕೀರ್ತಿ, ಕಡ್ಡಿಪುಡಿ ಚಂದ್ರು, ಹನುಮಂತೇಗೌಡ, ರಾಘು ಶ್ರೀವಾಸ್ತವ್, ಶಾಂಭವಿ, ಸೂರಜ್ (ಕಾಮಿಡಿ ಕಿಲಾಡಿಗಳು) ಮುಂತಾದವರು ನಟಿಸಿದ್ದಾರೆ
No Comment! Be the first one.