ಈಗೀಗ ಸ್ಯಾಂಡಲ್ ವುಡ್ ನ ಸ್ಟಾರ್ಗಳು ತಮ್ಮ ಸಿನಿಮಾಗಳ ಜತೆ ಜತೆಗೆ ಹೊಸ ಹೊಸ ಸಿನಿಮಾಗಳಿಗೆ ಹೆಚ್ಚೆಚ್ಚು ಕಾಯ, ವಾಚ, ಮನಸ್ಸಾ, ಪ್ರೋತ್ಸಾಹಿಸುವ, ಆಡಿಯೋ, ಟೀಸರ್, ಟ್ರೇಲರ್ ರಿಲೀಸ್ ಮಾಡುವಂತಹ ಆರೋಗ್ಯಕರ ಬೆಳವಣಿಗೆಯ ಕಡೆ ವಾಲುತ್ತಿದ್ದಾರೆ. ಇದು ಈಗೀಗ ಯತೇಚ್ಚವಾಗ್ತಿರೋದು ಎಲ್ಲರೂ ಖುಷಿ ಪಡುವ ಸಂಗತಿ. ಈ ವಿಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂಚೂಣಿಯಲ್ಲಿದ್ದಾರೆ. ಯಾವೊಬ್ಬನ ನಟನ ಸಿನಿಮಾ ಸೆಟ್ಟೇರಿದಾಗಿನಿಂದ ರಿಲೀಸ್ ಆಗುವ ತನಕ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸದಲ್ಲಿ ತಮ್ಮನ್ನು ವೈಯಕ್ತಿಕವಾಗಿ ತೊಡಗಿಸಿಕೊಂಡಿದ್ದಾರೆ ಡಿ. ಬಾಸ್. ಆದರೆ ಇಂತಹ ಕೆಲಸಗಳಲ್ಲಿ ಅಂತರ ಕಾಯ್ದುಕೊಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಆಶ್ಚರ್ಯವೆಂಬಂತೆ ಬಿಗ್ ಬಾಸ್ ಪ್ರಥಮ್ ಸಿನಿಮಾ ಸೆಟ್ಟಿಗೆ ಭೇಟಿ ಮಾಡಿದ್ರಂತೆ. ಹೌದು.. ಬಿಗ್ ಬಾಸ್ ಪ್ರಥಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅವರೇ ನಾಯಕನಾಗಿ ನಟಿಸುತ್ತಿರುವ ನಟ ಭಯಂಕರ ಸಿನಿಮಾ ಸೆಟ್ಟಿಗೆ ಭೇಟಿ ಮಾಡಿ ಪ್ರಥಮ್ರಿಗೆ ಶುಭ ಕೋರಿದ್ದಾರೆ ಗಣೇಶ್.
ನಟ ಭಯಂಕರ ಚಿತ್ರದ ಸಾಹಸ ಸನ್ನಿವೇಶದಲ್ಲಿ ರಿಸ್ಕ್ ತೆಗೆದುಕೊಂಡ ಕೆಲಸ ಮಾಡುತ್ತಿದ್ದ ಪ್ರಥಮ್ ರನ್ನು ಗಮನಿಸಿದ್ದ ಗೋಲ್ಡನ್ ಸ್ಟಾರ್ “ಸಿನಿಮಾ ಮಾಡು, ರಿಸ್ಕ್ ತಗೋ ಆದರೆ ರಿಸ್ಕನ್ನು ಪೆಟ್ಟು ಮಾಡ್ಕೊಂಡೇ ಪ್ರೂ ಮಾಡೋ ಅಗತ್ಯ ಇಲ್ಲ. ಮನರಂಜನೆಗೆ ಅದನ್ನು ಬಳಸ್ಕೋ ಎಂದು ಕಿವಿ ಮಾತು ಹೇಳಿದ್ದಾರೆ.
ಇನ್ನು ಬಾಸ್ ವಿಚಾರಕ್ಕೆ ಸಂಬಂಧಿಸಿದಂತೆ, “ನೀನು ಟೀಸರ್ ನಲ್ಲಿ ಪಿ ಬಾಸ್ ಅನ್ನೋ ಪದಕ್ಕೆ ಕೊಟ್ಟಿರುವ ಡೆಫನೇಶನ್ ನಿನ್ನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಅದನ್ನು ಹಾಗೇ ಉಳಿಸ್ಕೋ. ಇತ್ತೀಚಿಗೆ ನನ್ನ ಅಭಿಮಾನಿಗಳು ಗಣೇಶ್ ಬಾಸ್ ಇತ್ಯಾದಿಗಳ ಬಗ್ಗೆ ಚರ್ಚೆ ಮಾಡ್ತಿದ್ರು. ಆದರೆ ನಾನೇ ಅವರನ್ನು ಮನೆಗೆ ಕರೆಸಿ, ಅನ್ನ ಕೊಡುವ ನಿರ್ಮಾಪಕರು, ಸಿನಿಮಾ ನೋಡೋ ನೀವು ನನಗೆ ಬಾಸ್” ಎಂದು ಬುದ್ದಿವಾದ ಹೇಳಿ ಕಳಿಸಿದ್ದೆ ಎಂದರು.
ಇನ್ನು “ನಿನ್ನ ನಟಭಯಂಕರ ಸೆಟ್ಟಿನಲ್ಲಿ ಒಂದು ರೀತಿಯ ಪಾಸಿಟೀವ್ ಎನಿರ್ಜಿ ಇದೆ. ತುಂಬಾ ಒಳ್ಳೆಯದಾಗಲಿ. ನೀನು ಗೆಲ್ಲಬೇಕು ಎಂದು ವೈಯಕ್ತಿಕವಾಗಿ ಹಾರೈಸಿದ್ದಾರೆ. ಹಾಗೆ ನಟಭಯಂಕನ ನಾಯಕಿ ಸುಶ್ಮಿತ ಅವರಿಗೆ ಒಳ್ಳೆಯ ಎನಿರ್ಜಿ ಇದೆ. ಹಾಗೇ ಮಜಾ ಟಾಕೀಸ್ ಪವನ ನಾನು ಆತ್ಮೀಯ ಸ್ನೇಹಿತರು. ನಿಮ್ಮ ಟೀಮು ಅದ್ಬುತವಾಗಿದೆ. ನಿನ್ನ ಸಿನಿಮಾ ಹಿಟ್ ಆಗಲಿ” ಎಂದರು. ಮಾಡಿದ ಸಿನಿಮಾವನ್ನು ನಾನೇ ಕೆಲವೊಮ್ಮೆ ನೋಡೋಕಾಗಲ್ಲ. ಆದರೆ ಈ ಸಿನಿಮಾವನ್ನು ನನಗೆ ಮರೆಯದೇ ತೋರಿಸು ಎಂದರು.
ನಟ ಭಯಂಕರ ಸಿನಿಮಾದ ಶೂಟಿಂಗ್ ಇತ್ತೀಚಿಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ನಟಭಯಂಕರನಾಗಿ ಪ್ರಥಮ್, ಗಾಂಚಲಿ ಗೀತ ಪಾತ್ರದಲ್ಲಿ ಸುಶ್ಮಿತ, ಮಜಾಟಾಕೀಸ್ ಪವನ್, ಡೈಲಾಗ್ ಕಿಂಗ್ ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ದೇವ್ರಂಥಾ ಮನುಷ್ಯ ಚಿತ್ರದ ಬಳಿಕ ಸೈಲೆಂಟ್ ಆಗಿದ್ದ ಪ್ರಥಮ್, ಈ ಬಾರಿ ವ್ಯರ್ಥ ಕಲಾಪಕ್ಕೆ ಅಷ್ಟೇನು ಬೆಲೆ ಕೊಡದೇ ಮಾಡುವ ಪ್ರತಿ ಕೆಲಸದಲ್ಲಿಯೂ ಪರ್ಫೆಕ್ಷನ್ ಹುಡುಕ ಹೊರಟಿರುವುದು ಉತ್ತಮ ಬೆಳವಣಿಗೆ. ಭಯಂಕರ ಯಶಸ್ಸಿನ ಕಡೆಗೆ ಅವರ ಸಿನಿ ಯಾನ ಮುಂದುವರೆಯಲಿ ಎಂದು ಹಾರೈಸೋಣ.