ಕರ್ನಾಟಕ ರಿಗ್ ಮಾಲೀಕರ ಸಂಘದ ನೂತನ ಉಪಾಧ್ಯಕ್ಷರಾಗಿ ಎಸ್.ಆರ್.ಅನಿಲ್ ಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಬೋರ್ ವೆಲ್ ಮಾಲೀಕರ ಶ್ರೇಯೋಭಿವೃದ್ಧಿಗೆ 2004ರಲ್ಲಿ ಸಂಘವನ್ನು ಪ್ರಾರಂಭಿಸಲಾಗಿತ್ತು. ಆಂತರಿಕ ಆಡಳಿತ ಸಭೆಯಲ್ಲಿ ರಾಜೀನಾಮೆಯಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ರಾಯಲ್ ಬೋರ್ ವೆಲ್ಸ್ ಮಾಲೀಕರಾದ ಶ್ರೀ ಎಸ್ ಆರ್ ಅನಿಲ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ನೂತನ ಉಪಾಧ್ಯಕ್ಷರಿಗೆ ರಿಗ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನಾಗೇಶ್ ಮತ್ತು ಅಧ್ಯಕ್ಷರಾದ ಟಿ.ಎನ್.ಅರಸು ಮತ್ತು ನಿರ್ದೇಶಕರುಗಳಾದ ಕೃಷ್ಣಪ್ಪ, ಚನ್ನಪ್ಪ, ರಾಜಣ್ಣ, ಸತೀಶ್, ಜಗನ್ನಾಥ್, ನಾಗರಾಜ್, ಪ್ರಕಾಶ್, ಶಂಭುಲಿಂಗಯ್ಯ, ಮಂಜುನಾಥ್ ನಾಯ್ಡು, ಕುಮಾರ್, ರವಿ, ಶ್ರೀಧರ್, ಬಾಬು, ಸುಕುಮಾರ್ ಅವರು ಶುಭ ಕೋರಿದ್ದಾರೆ.
ಕರ್ನಾಟಕದಲ್ಲಿ ಬೋರ್ ವೆಲ್ ಸಂಸ್ಥೆ ನಡೆಸುತ್ತಿರುವ ಮಾಲೀಕರು ಸಾಕಷ್ಟು ಸಮಸ್ಯೆಗಳನ್ನೂ ಅನುಭವಿಸುತ್ತಲೇ ಬಂದಿದ್ದಾರೆ. ಇಂಧನ ಬೆಲೆ ಏರಿಕೆ, ಹೆಚ್ಚುತ್ತಿರುವ ವಾಹನ, ಯಂತ್ರೋಪಕರಣಗಳ ಮೌಲ್ಯ, ಕಾರ್ಮಿಕರ ಸಮಸ್ಯೆ, ಸರ್ಕಾರದ ಶುಲ್ಕನೀತಿ ಸೇರಿದಂತೆ ನಾನಾ ರೀತಿಯಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೋರ್ ವೆಲ್ ಮಾಲೀಕರ ಸರ್ವಾಂಗೀಣ ಪ್ರಗತಿಗಾಗಿ ಸಂಘಟಿತ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದ್ದೇ ಇದೆ. ಎಸ್.ಆರ್. ಅನಿಲ್ ಕುಮಾರ್ ಅವರು ಈಗಾಗಲೇ ತುಮಕೂರು ಜಿಲ್ಲೆಯ ಕುಣಿಗಲ್ ಮತ್ತು ಬೆಂಗಳೂರಿನ ನಾಗರಬಾವಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸಾಮಾಜಿಕ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ರಿಗ್ ಮಾಲೀಕರ ಸಂಕಷ್ಟಗಳಿಗೆ ಮಿಡಿದಿದ್ದಾರೆ. ಡೀಸೆಲ್ ಬೆಲೆ ಹೆಚ್ಚಳವಾದಾಗ ಬೋರ್ ವೆಲ್ ಕೊರೆಯುವ ಲಾರಿಗಳು ಮತ್ತು ರಿಗ್ ಮಾಲೀಕರನ್ನು ಒಂದೆಡೆ ಸೇರಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನಾ ಧರಣಿ ನಡೆಸಿದ್ದರಲ್ಲಿ ಎಸ್.ಆರ್. ಅನಿಲ್ ಕುಮಾರ್ ಅವರ ಪಾತ್ರ ಹಿರಿದು. ಸದ್ಯ ಅನಿಲ್ ಕುಮಾರ್ ಅವರು ಕರ್ನಾಟಕ ರಾಜ್ಯ ರಿಗ್ ಮಾಲೀಕರ ಸಂಘದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವುದು ಸಂಘಕ್ಕೆ ದೊಡ್ಡ ಬಲ ಬಂದಂತಾಗಿದೆ.