ಐಪಿಎಲ್ ಅಂದ್ರೆ ಅದೇನೋ ಸಂಭ್ರಮ ಸಡಗರ. 6 ವರ್ಷದ ಹುಡುಗರಿಂದ ಹಿಡಿದು 60 ವರ್ಷದ ವೃದ್ಧರವರಿಗೂ ಐಪಿಎಲ್ ಕಿಕ್ ಕೊಡುತ್ತೆ. ನಮ್ ಟೀಮ್ ನಿಮ್ ಟೀಮ್ ಅಂತಾ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನ ತೋರಿಸುತ್ತಾರೆ. ಈ ಮಧ್ಯೆ ಐಪಿಎಲ್ ಬಂದ್ರೆ ಸಾಕು ಬೆಟ್ಟಿಂಗ್ ದಂಧೆಗಳೂ ಶುರುವಾಗುತ್ತವೆ. ಐಪಿಎಲ್ ಶುರುವಾಗೋದಕ್ಕೇ ಅಂತಾ ಕೆಲ ಟೀಂಗಳು ಕಾಯ್ತಿರುತ್ತವೆ. ಒಂದಿಡೀ ಸಮೂಹವೇ ಬೆಟ್ಟಿಂಗ್ ದಂಧೆಗೆ ಬಲಿಯಾಗುತ್ತಿದೆ. ಹೀಗೆ ಬೆಟ್ಟಿಂಗ್ ಆಡೋರಿಗೆ ನಟ ಲವ್ಲಿ ಸ್ಟಾರ್ ಪ್ರೇಮ್ ಕಿವಿ ಮಾತು ಹೇಳಿದ್ದಾರೆ.
ಐಪಿಎಲ್ ಶುರುವಾಗಿದ್ದೇ ತಡ ಹಲವೆಡೆ ಬೆಟ್ಟಿಂಗ್ ದಂಧೆ ಶುರುವಾಗಿದೆ. ಹೀಗಾಗಿ ಎಲ್ಲರಿಗೂ ಬೆಟ್ಟಿಂಗ್ ಆಡಬೇಡಿ ಅಂತಾ ಪ್ರೇಮ್ ಮನವಿ ಮಾಡಿದ್ದಾರೆ. ಅದರಲ್ಲೂ ಯುವಕರು ಮತ್ತು ವಿಧ್ಯಾರ್ಥಿಗಳಿಗೆ ವಿಶೇಷವಾಗಿ ಕೇಳಿಕೊಂಡಿದ್ದಾರೆ. ನಿಮ್ಮ ತಂದೆ ತಾಯಿ ಓದೋಕೆ ಅಂತಾ ಕಷ್ಟಪಟ್ಟು, ಬಟ್ಟೆಗೆ, ಬುಕ್ಗಳಿಗಾಗಿ, ಪಾಕೆಟ್ ಮನಿಗೆ ಅಂತಾ ದುಡ್ಡು ಕೊಟ್ಟಿರ್ತಾರೆ. ಅಂತಹ ದುಡ್ಡಿಂದ ಬೆಟ್ಟಿಂಗ್ ಆಡಬೇಡಿ. ಬೆಟ್ಟಿಂಗ್ ಆಡಿ ಸೋತು, ಹರ್ಟ್ ಮಾಡ್ಕೊಂಡು ಆತ್ಮಹತ್ಯೆಗೆ ಮುಂದಾಗ್ಬೇಡಿ ಅಂತಾ ಪ್ರೇಮ್ ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಬೆಟ್ಟಿಂಗ್ನಿಂದ ಜೀವನ ಹಾಳುಮಾಡಿಕೊಂಡು ತಂದೆ ತಾಯಿಯ ಕನಸುಗಳ ಮೇಲೆ ಕಲ್ಲು ಹಾಕಬೇಡಿ ಅಂತಾ ಲವ್ಲಿ ಸ್ಟಾರ್ ಪ್ರೇಮ್ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ನಿಮ್ಮ ಪ್ರೀತಿಯ ಕ್ರಿಕೇಟರ್ಗಳ ಮೇಲೆ ಅಷ್ಟು ಪ್ರೀತಿ ಇದ್ರೆ ಅವರಂತೆ ದೊಡ್ಡ ಕ್ರೀಡಾಪಟುಗಳಾಗಿ ಅಂತಾ ಹುರಿದುಂಬಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರೇಮ್ ತಮ್ಮ ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ.
No Comment! Be the first one.