ತಮ್ಮ ಮಾಮೂಲಿ ಇಮೇಜನ್ನು ಮೀರಿಕೊಂಡು ಹೊಸಾ ಥರದ ಪಾತ್ರಗಳಿಗೆ ಹಾತೊರೆಯುತ್ತಿರುವವರು ನವರಸ ನಾಯಕ ಜಗ್ಗೇಶ್. ಅದೇ ಹಾದಿಯಲ್ಲಿ ೮ಎಂಎಂ ಚಿತ್ರದ ನಂತರ ಅವರು ಪ್ರೀಮಿಯರ್ ಪದ್ಮಿನಿ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡಿರೋ ಪ್ರೀಮಿಯರ್ ಪದ್ಮಿನಿ ಈಗ ಬಿಡುಗಡೆಯ ಹಂತಕ್ಕೆ ಬಂದು ತಲುಪಿಕೊಂಡಿದೆ.
ಇದೇ ಫೆಬ್ರವರಿ 25 ರಂದು ಈ ಚಿತ್ರದ ಆಡಿಯೋ ರಿಲೀಸ್ ಗೂ ಮುಹೂರ್ತ ನಿಗಧಿಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಆಡಿಯೋ ಬಿಡುಗಡೆ ಮಾಡಲಿದ್ದಾರಂತೆ. ಈ ಮೂಲಕ ದರ್ಶನ್ ನವರಸ ನಾಯಕನ ವಿಭಿನ್ನವಾದ ಚಿತ್ರಕ್ಕೆ ಭರ್ಜರಿ ಸಾಥ್ ನೀಡುತ್ತಿದ್ದಾರೆ. ಈ ಸಿನಿಮಾ ಚೆಂದದ ಪೋಸ್ಟರ್ ಮತ್ತು ಒಂದಷ್ಟು ಲಿರಿಕಲ್ ವೀಡಿಯೋಗಳ ಮೂಲಕ ಭಾರೀ ಸೌಂಡ್ ಕ್ರಿಯೇಟ್ ಮಾಡಿದೆ. ಇದರಲ್ಲಿ ಜಗ್ಗಣ್ಣ ಈವರೆಗಿನ ಅಷ್ಟೂ ಪಾತ್ರಗಳನ್ನು ನಿವಾಳಿಸಿ ತೆಗೆಯುವಂಥಾ ಡಿಫರೆಂಟ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
ಇದು ಕಾರಿನ ಮೇಲೆ ಅಪಾರವಾದ ಮೋಹ ಹೊಂದಿರೋ ವ್ಯಕ್ತಿಯೋರ್ವನ ಸುತ್ತಾ ನಡೆಯೋ ಅಪರೂಪದ ಕಥೆ ಹೊಂದಿರೋ ಚಿತ್ರ. ಇದು ನವರಸ ನಾಯಕನ ಪಾಲಿಗೆ ಹೊಸತಾದ ಇಮೇಜ್ ಒಂದನ್ನು ಕಟ್ಟಿ ಕೊಡುತ್ತದೆಂಬ ಅಭಿಪ್ರಾಯವೇ ಈಗ ಎಲ್ಲೆಡೆ ಮೂಡಿಕೊಂಡಿದೆ. ಇದೀಗ ಪ್ರೀಮಿಯರ್ ಪದ್ಮಿನಿಗೆ ಖುದ್ದು ದರ್ಶನ್ ಅವರೇ ಸಾಥ್ ಕೊಡುತ್ತಿರೋದರಿಂದ ಕ್ರೇಜ್ ನೂರ್ಮಡಿಸಿದೆ!
No Comment! Be the first one.