ಕನ್ನಡ ಚಿತ್ರರರಂಗದ ಖ್ಯಾತ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಮಹಾ ಕಂಟಕದಿಂದ ಪಾರಾಗಿದ್ದಾರೆ. ರಾಜವರ್ಧನ್ ಬಿಚ್ಚುಗತ್ತಿ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆಂಬ ವಿಚಾರ ಗೊತ್ತೇ ಇದೆ. ಇದರ ಚಿತ್ರೀಕರಣ ನೆಲಮಂಗಲದ ಸಮೀಪ ನಡೆಯುತ್ತಿದ್ದ ವೇಳೆಯಲ್ಲಿ ಮಹಾ ಅವಘಡವೊಂದು ಸಂಭವಿಸಿದೆ.
ಸದ್ಯ ಬೆನ್ನಿಗೆ ಗಾಯವಾಗಿರೋದರಿಂದ ರಾಜವರ್ಧನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹರಿ ಸಂತು ನಿರ್ದೇಶನದಲ್ಲಿ ಬಿಚ್ಚುಗತ್ತಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ನೆಲಮಂಗಲ ಸೀಮೆಯಲ್ಲಿ ಅವ್ಯಾಹತವಾಗಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕುದುರೆ ಸವಾರಿಯ ಚಿತ್ರೀಕರಣ ನಡೆಯುತ್ತಿದ್ದ ವೇಳೆಯಲ್ಲಿ ರಾಜವರ್ಧನ್ ಆಯತಪ್ಪಿ ಕೆಳ ಬಿದ್ದು ಬೆನ್ನಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ರಾಜವರ್ಧನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ರಾಜವರ್ಧನ್ ಗೆ ಇನ್ನೊಂದು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಈ ಕಾರಣದಿಂದ ಬಿಚ್ಚುಗತ್ತಿ ಚಿತ್ರೀಜಕರಣದ ವೇಗಕ್ಕೆ ತಾತ್ಕಾಲಿಕವಾಗಿ ಹಿನ್ನಡೆಯಾದಂತಾಗಿದೆ. ನೆಲಮಂಗಲದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಚಿತ್ರದುರ್ಗದ ಕೋಟೆಗೆ ಶಿಫ್ಟ್ ಆಗಲು ಯೋಜನೆ ಹಾಕಿಕೊಳ್ಳಲಾಗಿತ್ತು. ರಾಜವರ್ಧನ್ ಚೇತರಿಸಿಕೊಂಡ ನಂತರವಷ್ಟೇ ಅದು ಸಾಧ್ಯವಾಗಲಿದೆ.
No Comment! Be the first one.