’ಒಡು ಅಡಾರ್ ಲವ್’ ಮಲಯಾಳಂ ಚಿತ್ರದ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಹೊಡೆದ ವಿಡಿಯೋ ಕಳೆದ ವರ್ಷ ವೈರಲ್ ಆಗಿತ್ತು. ದಿನಬೆಳಗಾಗುವುದರೊಳಗೆ ಆಕೆ ಪಡ್ಡೆಹುಡುಗರ ಮನಸ್ಸು ಕೆರಳಿಸಿದ್ದಳು. ಇದೀಗ ಫೆಬ್ರವರಿ 14ರ ವ್ಯಾಲೆಂಟೇನ್ ದಿನದಂದು ಚಿತ್ರ ತೆರೆಗೆ ಬರುತ್ತಿದೆ. ಮಲಯಾಳಂ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಡಬ್ ಆಗಿ ತೆರೆಕಾಣುತ್ತಿರುವುದು ವಿಶೇಷ. ಕನ್ನಡದಲ್ಲಿ ’ಕಿರಿಕ್ ಲವ್ಸ್ಟೋರಿ’ ಮತ್ತು ತೆಲುಗಿನಲ್ಲಿ ’ಲವರ್ಸ್ ಡೇ’ ಶೀರ್ಷಿಕೆಯಡಿ ಸಿನಿಮಾ ಪ್ರೇಕ್ಷಕರನ್ನು ತಲುಪಲಿದೆ.
ಒಮರ್ ಲುಲ್ಲು ನಿರ್ದೇಶನದ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ತೆಲುಗು ಅವತರಣಿಕೆಯ ಕಿಸ್ಸಿಂಗ್ ವಿಡಿಯೋ ಆನ್ಲೈನ್ನಲ್ಲಿ ಲೀಕ್ ಆಗಿದೆ. ಚಿತ್ರದ ಪ್ರಮಖ ಪಾತ್ರಧಾರಿಗಳಾದ ಪ್ರಿಯಾ ವಾರಿಯರ್ ಮತ್ತು ರೋಶನ್ ಕ್ಯೂಟ್ ಕಿಸ್ಸಿಂಗ್ ದೃಶ್ಯ ಇಲ್ಲಿದೆ. ಹುಬ್ಬೇರಿಸಿ ಕಣ್ಹೊಡೆವ ಟೀಸರ್ನಂತೆಯೇ ಹೊಸ ಟೀಸರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಲೀಕ್ ಆದ ಕೆಲವೇ ಗಂಟೆಗಳಲ್ಲಿ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ಇದು ಚಿತ್ರದ ಪ್ರಚಾರಕ್ಕೆ ವರವಾಗಿದೆ.
ಹಾಗೆ ನೋಡಿದರೆ ’ಒರು ಅಡಾರ್ ಲವ್’ ಕಳೆದ ವರ್ಷವೇ ತೆರೆಕಾಣಬೇಕಿತ್ತು. ಪ್ರಿಯಾ ವಾರಿಯರ್ ಕಣ್ಹೊಡೆವ ಟೀಸರ್ ವೈರಲ್ ಆಗುತ್ತಿದ್ದಂತೆ ನಿರ್ಮಾಪಕರು ಚಿತ್ರದ ಬಿಡುಗಡೆಯನ್ನು ಮುಂದೂಡಿದರು. ಚಿತ್ರಕಥೆಯಲ್ಲಿ ಕೊಂಚ ಮಾರ್ಪಾಟು ಮಾಡಿ, ಕೆಲವು ಸನ್ನಿವೇಶಗಳನ್ನು ಮತ್ತೆ ಚಿತ್ರಿಸಿದರು. ಇದೀಗ ಸಿನಿಮಾ ಮೂಲ ಮಲಯಾಳಂ ಜೊತೆ ಕನ್ನಡ ಮತ್ತು ತೆಲುಗಿನಲ್ಲೂ ತೆರೆಕಾಣುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಚಿತ್ರವನ್ನು ಇತರೆ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಜನೆ ನಿರ್ಮಾಪಕರಿಗಿದೆ. ಈ ಮಧ್ಯೆ ’ಶ್ರೀದೇವಿ ಬಂಗಲೋ’ ಹಿಂದಿ ಚಿತ್ರದೊಂದಿಗೆ ಪ್ರಿಯಾ ಪ್ರಕಾಶ್ ಬಾಲಿವುಡ್ಗೆ ಹಾರಿದ್ದಾರೆ.
#
No Comment! Be the first one.