ಇದೇ ತಿಂಗಳ ಹದಿನೇಳರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಈಗಾಗಲೇ ಈ ಸಂಭ್ರಮಾಚರಣೆಗೆ ಅಭಿಮಾನಿ ಬಳಗ ತಯಾರಾಗುತ್ತಿದೆ. ಈ ಬಾರಿ ಒಂದು ದಿನ ತಡವಾಗಿ ನಡೆಯಲಿರೋ ಈ ಸಂಭ್ರಮವನ್ನು ಯುವರತ್ನೋತ್ಸವ ಎಂಬ ಶೀರ್ಷಿಕೆಯಡಿಯಲ್ಲಿ ಆಚರಿಸಲು ಅಭಿಮಾನಿ ಬಳಗ ಸನ್ನದ್ಧವಾಗಿದೆ. ಇಂಥಾ ಅಭಿಮಾನಿಗಳ ಪ್ರೀತಿಗೆ ಸ್ಪೆಷಲ್ ಗಿಫ್ಟೊಂದನ್ನು ನೀಡಲು ಪುನೀತ್ ರಾಜ್ ಕುಮಾರ್ ನಿರ್ಧರಿಸಿದ್ದಾರೆ. ಹುಟ್ಟುಹಬ್ಬದಂದೇ ಪುನೀತ್ ರಾಜ್ ಕುಮಾರ್ ಅವರ ಹೊಸಾ ಚಿತ್ರ ಯುವರತ್ನದ ಫಸ್ಟ್ ಲುಕ್ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಈ ಕುರಿತಾಗಿ ನಿರ್ದೇಶಕ ಸಂತೋಷ್ ಆನಂದರಾಮ್ ಅವರೇ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಇದು ಪವರ್ ಸ್ಟಾರ್ ಅಭಿಮಾನಿಗಳನ್ನು ಥ್ರಿಲ್ ಆಗಿಸುವಂಥಾ ಗಿಫ್ಟ್ ಅನ್ನೋದರಲ್ಲಿ ಎರಡು ಮಾತಿಲ್ಲ.
ಯಾಕೆಂದರೆ, ಯುವರತ್ನ ಚಿತ್ರದ ಬಗ್ಗೆ ಪುನೀತ್ ಅಭಿಮಾನಿಗಳೆಲ್ಲ ಭಾರೀ ನಿರೀಕ್ಷೆ ಹೊಂದಿದ್ದಾರೆ. ರಾಜಕುಮಾರ ಮೂಲಕ ಈ ಜೋಡಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅಚ್ಚಳಿಯದಂಥಾ ಸೂಪರ್ ಹಿಟ್ ಚಿತ್ರವನ್ನ ಕೊಟ್ಟಿದ್ದರು. ಈಗ ಅದೇ ಸಂತೋಷ್ ಆನಂದರಾಮ್ ನಿರ್ದೇಶನ ಮಾಡಲಿರೋ ಯುವರತ್ನ ಚಿತ್ರವೂ ಅಂಥಾದ್ದೇ ಗೆಲುವು ದಾಖಲಿಸಲಿದೆ ಅನ್ನೋ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಪುನೀತ್ ರಾಜ್ ಕುಮಾರ್ ಕೂಡಾ ಈ ಬಗ್ಗೆ ಖುಷಿಗೊಂಡಿದ್ದಾರೆ. ಈ ಬಾರಿ ಅಪ್ಪು ಹುಟ್ಟುಹಬ್ಬವನ್ನು ಯುವರತ್ನೋತ್ಸವ ಅಂತ ಆಚಲಿಸಲು ಅಭಿಮಾನಿಗಳು ಕಾತರರಾಗಿದ್ದರು. ಆದರೆ ಆ ದಿನ ಪುನೀತ್ ಬೇರೆ ಊರಲ್ಲಿರೋದರಿಂದ ಒಂದು ದಿನ ತಡವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಅಪ್ಪು ಆ ಇಡೀ ದಿನವನ್ನು ಅಭಿಮಾನಿಗಳಿಗಾಗಿಯೇ ಮೀಸಲಿಡಲಿದ್ದಾರೆ.
No Comment! Be the first one.