ರಚಿತಾ ರಾಮ್ ಕನ್ನಡ ಚಿತ್ರರಂಗದ ಬಿಂದಾಸ್ ಹುಡುಗಿ. ಇಂಥಾ ರಚಿತಾ ಮದುವೆ ವಿಚಾರದ ಬಗ್ಗೆ ಆಕೆಯ ಹೆತ್ತವರು ತಲೆ ಕೆಡಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅಭಿಮಾನಿಗಳಿಗಂತೂ ಆ ತಲೆ ಬಿಸಿ ವಿಪರೀತವಾಗಿದೆ. ರಚಿತಾ ಮದುವೆ ಸುತ್ತಾ ಆಗಾಗ ಥರ ಥರದ ರೂಮರ್ಗಳು ಹುಟ್ಟಿಕೊಳ್ಳುತ್ತವಲ್ಲಾ? ಅದರ ಹಿಂದಿರೋದು ಇಂಥಾದ್ದೇ ಕಿಸುರು!
ಇದೀಗ ಆರ್ ಚಂದ್ರು ನಿರ್ದೇಶನದ, ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿಯೂ ಕೂಡಾ ರಚಿತಾಗೆ ಇಂಥಾದ್ದೇ ಪ್ರಶ್ನೆ ಮಾಧ್ಯಮ ಮಂದಿಯ ಕಡೆಯಿಂದ ಎದುರಾಗಿದೆ. ಅದಕ್ಕೆ ಆಕೆ ಬಿಂದಾಸ್ ಧಾಟಿಯಲ್ಲಿಯೇ ಉತ್ತವನ್ನೂ ರವಾನಿಸಿದ್ದಾರೆ.
ಯಾವುದೇ ಸಿನಿಮಾ ಸಂಬಂಧಿತ ಪತ್ರಿಕಾ ಗೋಷ್ಠಿ ಇದ್ದರೂ ನಾಯಕಿಯರು ಝಗಮಗಿಸುವ ದಿರಿಸಿನಲ್ಲಿ ಕಂಗೊಳಿಸೋದು ಮಾಮೂಲಿ. ಆದರೆ ರಚಿತಾ ಮಾತ್ರ ಖಾದಿ ಜುಬ್ಬಾವನ್ನು ಹೋಲುವ ಡ್ರೆಸ್ಸಿನಲ್ಲಿ ಕಾಣಿಸಿಕೊಂಡಿದ್ದರು. ಪಕ್ಕದಲ್ಲಿ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪ್ಪಿ. ಅವರ ಬಾಜಿನಲ್ಲಿ ಖಾದಿ ತೊಟ್ಟಂಥಾ ರಚಿತಾ… ಇಷ್ಟಿದ್ದರೆ ಸಿನಿಮಾ ಪ್ರೋಗ್ರಾಮಿಗೆ ಪೊಲಿಟಿಕಲ್ ಟಚ್ ಸಿಗದಿರುತ್ತಾ?
ಹೇಳಿಕೇಳಿ ಈ ಹಿಂದೆಯೇ ರಚಿತಾ ರಾಮ್ ಉಪೇಂದ್ರನ ಪ್ರಜಾಕೀಯ ಪಾರ್ಟಿ ಸೇರಿಕೊಳ್ಳುತ್ತಾಳೆಂಬ ರೂಮರ್ ಹಬ್ಬಿಕೊಂಡಿತ್ತು. ಇದೀಗ ಆಕೆ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದೇ ಪ್ರಜಾಕೀಯ ಸೇರುತ್ತೀರಾ ಎಂಬ ಪ್ರಶ್ನೆ ತೂರಿ ಬಂದಿತ್ತು. ಅದಕ್ಕೆ ವಿವರವಾದ ಉತ್ತರ ಕೊಟ್ಟ ರಚಿತಾ ನಿರಾಳವಾಗೋ ಮುನ್ನವೇ ಮಾಧ್ಯಮದವರ ಪ್ರಶ್ನೆ ಮದುವೆಯತ್ತ ಹೊರಳಿಕೊಂಡಿತ್ತು. ಅದುವರೆಗೆ ರಾಜಕೀಯದ ಬಗ್ಗೆ ಮಾತಾಡುತ್ತಾ ಏಕಾಏಕಿ ಮದುವೆ ಪ್ರಶ್ನೆ ಕೇಳಿದ್ದರಿಂದಾಗಿ ರಚಿತಾ, ಹೌದು ನಾನು ರಾಜಕೀಯ ಸೇರೋದಿಲ್ಲ, ರಾಜಕಾರಣಿಯನ್ನೇ ಮದುವೆಯಾಗ್ತೀನಿ ಏನೀಗ? ಅಂತ ಬಿಂದಾಸ್ ಪ್ರಶ್ನೆಯನ್ನು ಮಾಧ್ಯಮದವರತ್ತಲೇ ವಗಾಯಿಸಿದಳು.
ಹೀಗೆ ರಚಿತಾ ಬಾಯಿ ತಪ್ಪಿ ಸತ್ಯ ಹೇಳಿದಳಾ? ಆಕೆ ಈಗಾಗಲೇ ರಾಜಕಾರಣಿಯನ್ನು ಮದುವೆಯಾಗೋ ಪ್ಲಾನು ಹಾಕಿಕೊಂಡಿದ್ದಾಳಾ? ಒಂದು ವೇಳೆ ಅದು ಸತ್ಯವೇ ಆಗಿದ್ದರೆ ಆ ಖಾದಿ ತೊಟ್ಟ ಪುಣ್ಯಾತ್ಮನ್ಯಾರು ಎಂಬ ಅಡಿಷನಲ್ ಪ್ರಶ್ನೆಗಳೀಗ ರಚಿತಾಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ!
#
No Comment! Be the first one.