ಕನ್ನಡ ಚಿತ್ರರಂಗದ ದೊಡ್ಮನೆ ಎಂದೇ ಹೆಸರಾದ ಅಣ್ಣಾವ್ರು ವರನಟ ಡಾ. ರಾಜ್ ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಮದುವೆಯ ಸಿದ್ದತೆಗಳು ಕಲರ್ ಫುಲ್ ಆಗಿ ನಡೆಯುತ್ತಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವರಾಜ್ ಕುಮಾರ್ ಹಾಗೂ ಮೈಸೂರು ಮೂಲದ ಶ್ರೀ ದೇವಿ ಭೈರಪ್ಪ ಜೊತೆ ಕಳೆದ ವರ್ಷ ಮೈಸೂರಿನಲ್ಲಿಯೆ ಅದ್ದೂರಿ ನಿಶ್ಚಿತಾರ್ಥ ನಡೆದಿತ್ತು.! ಇದೀಗ ಈ ಜೋಡಿ ಮದುವೆ ಮಂಟಪ ಏರುತ್ತಿದ್ದು ಇದೇ ತಿಂಗಳಲ್ಲಿ ರಾಜ್ ಕುಟುಂಬ ಅದ್ದೂರಿ ಮದುವೆ ನಡೆಯಲಿದೆ.
ಸದಾಶಿವನಗರದಲ್ಲಿರುವ ಡಾ. ರಾಜ್ ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರ ಮನೆಯಲ್ಲಿ ಮದುವೆಯ ತಯಾರಿ ಭರ್ಜರಿಯಾಗಿ ಸಾಗಿದ್ದು, ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚುವ ಕಾರ್ಯ ಶುರುವಾಗಿದೆ. ಸುಂದರವಾದ ಇನ್ವಿಟೇಷನ್ ಕಾರ್ಡ್ ಜೊತೆಗೆ ಒಂದು ಗಿಡ ಕೊಡುವ ಮೂಲಕ ಮದುವೆಗೆ ಆಹ್ವಾನ ಮಾಡುತ್ತಿದ್ದು, ವಿನಯ್ ರಾಜ್ ಕುಮಾರ್, ಅವರ ತಾಯಿ ಮತ್ತು ಇತರರು ಮದುವೆ ಕಾರ್ಡ್ ಹಂಚುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
No Comment! Be the first one.