ಸೂಪರ್ ಸ್ಟಾರ್ ರಜನಿಕಾಂತ್ ಅವರ 165ನೇ ಸಿನಿಮಾ ಪೆಟ್ಟಾ ನಂತರ ಮತ್ತಾವುದೇ ಸಿನಿಮಾವೂ ತೆರೆಕಂಡಿಲ್ಲ. ಪೆಟ್ಟಾ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ್ದರು. ಚಿತ್ರದಲ್ಲಿ ವಿಜಯ್ ಸೇತುಪತಿ, ತ್ರಿಶಾ, ನವಾಸುದ್ದೀನ್ ಸಿದ್ದಿಕ್, ಸಿಮ್ರಾನ್ ಅಭಿನಯಿಸಿದ್ದರು. ಸದ್ಯದ ಸುದ್ದಿ ಏನಪ್ಪಾ ಅಂದ್ರೆ ತಲೈವಾ ರಜನಿ ಅವರ 166ನೇ ಸಿನಿಮಾವನ್ನು ಎ.ಆರ್. ಮುರುಗದಾಸ್ ನಿರ್ದೇಶಿಸಲಿದ್ದಾರಂತೆ.
ತಲಪತಿ ವಿಜಯ್ ಅವರ ರಾಜಕೀಯ ಕಥಾ ಹಂದರವಿರುವ ಸರ್ಕಾರ್ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಲ್ಲಿ ನಿರ್ದೇಶಿಸಿದ್ದರು. ರಜನಿ ಮತ್ತು ಮುರುಗದಾಸ್ ಕಾಂಬಿನೇಷನ್ನಿನ ಹೊಸ ಸಿನಿಮಾವು ಏಪ್ರಿಲ್ 10 ರಂದು ತನ್ನ ಚಿತ್ರೀಕರಣವನ್ನು ಆರಂಭಿಸಲಿದೆ. ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಗೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಜತೆಯಾಗಲಿದ್ದಾರೆ. ಈ ಹಿಂದೆ ಚಂದ್ರಮುಖಿ ಸಿನಿಮಾ ಮೂಲಕ ಈ ಜೋಡಿ ಮೋಡಿ ಮಾಡಿತ್ತು. ಇನ್ನು ಹೆಸರಿಡದ ಈ ಚಿತ್ರಕ್ಕೆ ಅನಿರುದ್ಧ ಸಂಗೀತ ಸಂಯೋಜನೆ ಮಾಡುತ್ತಿದ್ದು, ಸಂತೋಷ್ ಶಿವನ್ ಛಾಯಾಗ್ರಹಣ ಮಾಡುತ್ತಿದ್ದಾರೆ. ತಲೈವಾ ರಜನಿ ಮತ್ತು ಮುರುಗದಾಸ್ ಜೋಡಿ ತುಪಾಕಿ ಮತ್ತು ಸ್ಪೈಡರ್ ಸಿನಿಮಾಗಳಲ್ಲಿಯೂ ಕೆಲಸ ಮಾಡಿತ್ತು.