ಅದೃಷ್ಟ ಅನ್ನೋದು ಹೇಳಿ ಕೇಳಿ ಬರುವಂತದ್ದಲ್ಲ. ನಾವು ನಿರೀಕ್ಷಿಸಿದಾಗ ಕೈ ಕೊಡುವ ಅದೇ ಅದೃಷ್ಟ ಅನಿರೀಕ್ಷಿತವಾಗಿ ನಮ್ಮ ಮನೆ ಬಾಗಿಲು ತಟ್ಟುತ್ತದೆ. ಪಶ್ಚಿಮ ಬಂಗಾಳದ ರೈಲ್ವೆ ಸ್ಟೇಷನ್ನಿನಲ್ಲಿ ಒಂದೊತ್ತಿನ ಊಟ ಬಿಸ್ಕೆಟ್, ಟೀ ಕಾಫಿಗಾಗಿ ಹಾಡುತ್ತಿದ್ದ ರಾಣು ಮೊಂಡಾಲ್ ರಾತ್ರೋ ರಾತ್ರಿ ಸ್ಟಾರ್ ಪಟ್ಟವನ್ನು ಪಡೆದರೆಂದರೆ ಅದು ಅದೃಷ್ಟವಲ್ಲದೇ ಮತ್ತೇನು. ಅದಕ್ಕೂ ಮಿಗಿಲಾಗಿ ಸಿನಿಮಾವೊಂದಕ್ಕೆ ಆಫರ್ ಪಡೆದೂ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಂದಲೇ ಭವ್ಯವಾದ ಬಂಗಲೆಯನ್ನೇ ಗಿಫ್ಟ್ ಪಡೆದುಕೊಂಡಿರುವ ರಾಣು ಲಕ್ಕು ಈಗ ಆಕೆಯ ಕೈ ಹಿಡಿದಿದೆಯಷ್ಟೇ.
ರಾಣು ಮೊಂಡಾಲ್ ಹಾಡಿದ ಹಾಡನ್ನು ಕೇಳಿ ಫಿದಾ ಆಗಿದ್ದ ಸಲ್ಮಾನ್ ಖಾನ್ ಅವರು ರಾನು ಮೊಂಡಲ್ ಅವರಿಗೆ ಸಹಾಯ ಮಾಡಲು ಮುಂದಾಗಿರುವುದಲ್ಲದೇ, ಅವರಿಗೆ ಅವರಿಗೆ 55 ಲಕ್ಷ ರೂ. ಮನೆ ಕೊಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಸಲ್ಮಾನ್ ಖಾನ್ ಯಾವುದೇ ಅಧಿಕೃತ ಮಾಹಿತಿ ರಿವೀಲ್ ಮಾಡಿಲ್ಲ. ಅಲ್ಲದೇ ಸಲ್ಮಾನ್ ಖಾನ್ ತಮ್ಮ ಮುಂಬರುವ ದಬಾಂಗ್ 3 ಚಿತ್ರದಲ್ಲಿ ಹಾಡಲು ಅವಕಾಶ ನೀಡಲಿದ್ದಾರೆ ಎಂಬ ಗುಸು ಗುಸು ಬಿ ಟೌನಿನಲ್ಲಿದೆ. ಯಾವುದಕ್ಕೂ ಕಾದು ನೋಡೋಣ.