ರಶ್ಮಿಕಾ ಮಂದಣ್ಣ ಒಂದು ಕಡೆ ಕನ್ನಡದಲ್ಲಿ ತನ್ನ ಮೇಲೆ ಟ್ರೋಲಿಂಗ್ ಮೂಲಕ ಅಮರಿಕೊಳ್ಳುತ್ತಿರುವವರ ಬಗ್ಗೆ ಬೇಸರ ಮಾಡಿಕೊಂಡಿದ್ದಾರೆ. ಥೇಟು ಕಿರಿಕ್ ಪಾರ್ಟಿಯ ಸಾನ್ವಿಯಂತೆಯೇ ಆಗಾಗ ಬಂದು ಇಂಥವರಿಗೆ ಬೈದು ವಾಪಾಸಾಗುತ್ತಿದ್ದಾರೆ. ಆದರೆ ಇಂಥಾ ಸವಾಲುಗಳೆಲ್ಲವೂ ಕೂಡಾ ಈಕೆಯ ಪಾಲಿಗೆ ಅದೃಷ್ಟವಾಗಿಯೇ ಬದಲಾಗುತ್ತಿರೋದು ಮಾತ್ರ ನಿಜಕ್ಕೂ ವಿಶೇಷ!
ಕಿರಿಕ್ ಪಾರ್ಟಿ ಚಿತ್ರದ ಮೂಲಕವೇ ಬೆಳಕಿಗೆ ಬಂದ ರಶ್ಮಿಕಾ ಬೆಳೆದ ಪರಿ ಯಾರಾದರೂ ಅಚ್ಚರಿ ಪಡುವಂಥಾದ್ದೇ. ಕನ್ನಡದಲ್ಲಿ ಸ್ಟಾರ್ ನಟರಿಗೆ ಜೋಡಿಯಾಗಿ ನಟಿಸಿದ್ದ ಈಕೆಯೀಗ ತೆಲುಗಿನಲ್ಲಿಯೂ ಬೇಡಿಕೆಯ ನಟಿ. ಇದೀಗ ರಶ್ಮಿಕಾ ಮತ್ತೊಂದು ತಮಿಳು ಚಿತ್ರದಲ್ಲಿ ನಟಿಸುತ್ತಿರೋ ಸುದ್ದಿ ಬಂದಿದೆ.
ಶಿವಕಾರ್ತಿಕೇಯನ್ ನಟಿಸುತ್ತಿರೋ ಎಸ್ಕೆ ೧೭ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈ ಮೂಲಕ ಇತ್ತೀಚೆಗಷ್ಟೇ ಯಜಮಾನ ಚಿತ್ರದ ಕಾವೇರಿಯಾಗಿ ಮಿಂಚಿದ್ದ ರಶ್ಮಿಕಾ ತಮಿಳುನಾಡಿನಲ್ಲಿಯೂ ಹವಾ ಸೃಷ್ಟಿಸಲು ಮುಂದಾಗಿದ್ದಾಳೆ.
ತೆಲುಗಿನಲ್ಲಂತೂ ರಶ್ಮಿಕಾ ಮಂದಣ್ಣ ಈಗ ಸ್ಟಾರ್ ನಟಿ. ವಿಜಯ್ ದೇವರಕೊಂಡನ ಜೊತೆ ನಟಿಸಿದ್ದ ಗೀತಾ ಗೋವಿಂದಮ್ ಸೂಪರ್ ಹಿಟ್ ಆಗುತ್ತಲೇ ರಶ್ಮಿಕಾಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಟ್ಟಿದೆ. ಇದೀಗ ಡಿಯರ್ ಕಾಮ್ರೆಡ್ ಚಿತ್ರದ ಮೂಲಕ ಮತ್ತೆ ವಿಜಯ್ ದೇವರಕೊಂಡ ಜೊತೆ ನಟಿಸಿದ್ದಾಳೆ. ಸದ್ಯ ಈ ಸಿನಿಮಾ ಲಿಪ್ ಲಾಕ್ ಸೀನಿನ ಮೂಲಕವೇ ಸುದ್ದಿಯಲ್ಲಿದೆ. ಒಟ್ಟಾರೆಯಾಗಿ ನಮ್ಮ ಕುಂದಾಪುರ ಶೆಟ್ಟರ ಕೈತಪ್ಪಿದ ನಕ್ಷತ್ರ ಊರುತುಂಬಾ ಹೊಳೆಯುತ್ತಿದೆ!
No Comment! Be the first one.