ರಶ್ಮಿಕಾ ತಮ್ಮ ಅಪ್ ಕಮಿಂಗ್ ಸಿನಿಮಾ ಸುದ್ದಿಯನ್ನು ಅಭಿಮಾನಿಗಳೊಟ್ಟಿಗೆ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದಾರೆ. ಸದ್ಯಕ್ಕೆ ರಶ್ಮಿಕಾ ‘ಭೀಷ್ಮ’ ಎಂಬ ಹೊಸ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೊದಲ ಪೋಸ್ಟರ್ ನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ‘ಭೀಷ್ಮ’ ಸಿನಿಮಾವನ್ನು ವೆಂಕಿ ಕುದುಮುಲಾ ನಿರ್ದೇಶನ ಮಾಡುತ್ತಿದ್ದಾರೆ.
ವಿಶೇಷ ಅಂದ್ರರೆ ಶ್ಮಿಕಾ ಅಭಿನಯದ ‘ಚಲೋ’ ಸಿನಿಮಾವನ್ನು ಕೂಡ ಇವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ಮೂಲಕ ಟಾಲಿವುಡ್ ಗೆ ರಶ್ಮಿಕಾರನ್ನು ಲಾಂಚ್ ಮಾಡಿದ್ದರು. ಸೌತ್ ಚಿತ್ರರಂಗದ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿರುವ ರಶ್ಮಿಕಾ ಈ ಬಾರಿ ನಿತಿನ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಗೀತ ಗೋವಿಂದಂ ಖ್ಯಾತಿಯ ವಿಜಯ್ ದೇವರಕೊಂಡ ಜತೆಗೆ ನಟಿಸಿರುವ ಡಿಯರ್ ಕಾಮ್ರೇಡ್ ಸಿನಿಮಾವು ಮೇ ತಿಂಗಳು ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ರಿಲೀಸ್ ಆಗಲಿದೆ. ಇನ್ನು ಕನ್ನಡದಲ್ಲಿ ವೃತ್ತ ಸಿನಿಮಾದಲ್ಲಿಯೂ ರಶ್ಮಿಕಾ ಅಭಿನಯಿಸಿದ್ದು, ಆ ಚಿತ್ರವು ಜೂನ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ.
No Comment! Be the first one.