ವಿದೇಶಿ ಕನ್ನಡಿಗರುಗಳಾದ ಸಂದೀಪ್ ಕುಮಾರ್, ನಟರಾಜ್ ಹಾಗೂ ಇತರರು ಎಸ್ ಎನ್ ಎಸ್ ಸಿನಿಮಾ ಬ್ಯಾನರ್ ಅಡಿಯಲ್ಲಿ ತಯಾರಿಸಿರುವ ಚಿತ್ರ `ರತ್ನಮಂಜರಿ’. ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನು ಒಳಗೊಂಡಿರುವ ರತ್ನಮಂಜರಿ ಚಿತ್ರ ಇದೇ ತಿಂಗಳು ತೆರೆಗೆ ಬರಲು ರೆಡಿಯಾಗಿದೆ. ಈ ಸಿನಿಮಾ ಟ್ರೇಲರ್ ರಿಲೀಸಾದಾಗಿನಿಂದ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿಬಿಟ್ಟಿತ್ತು.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿರುವವರು ಪ್ರಸಿದ್ದ್. ಅಮೆರಿಕಾದಲ್ಲಿ ನಡೆದ ನೈಜ ಘಟನೆಯೊಂದನ್ನಾಧರಿಸಿ ಈ ಚಿತ್ರದ ಕಥೆಯನ್ನು ಮಾಡಲಾಗಿದ್ದು ರಾಜ್ ಚರಣ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಖಿಲಾ ಪ್ರಕಾಶ್, ಪಲ್ಲವಿರಾಜು ಹಾಗೂ ಶ್ರದ್ಧಾ ಸಾಲಿಯಾನ ಮೂರು ಜನ ನಾಯಕಿಯರಾಗಿ ಅಭಿನಯಿಸಿದ್ದಾರೆ. ಈ ಮೂವರಲ್ಲಿ ರತ್ನಮಂಜರಿ ಯಾರು ಎನ್ನುವುದೇ ಚಿತ್ರದ ಸಸ್ಪೆನ್ಸ್. ಹರ್ಷವರ್ಧನ ರಾಜ್ ಅವರ ಸಂಗೀತ ಸಂಯೋಜನೆ ಹಾಗೂ ಪ್ರೀತಂ ತೆಗ್ಗಿನಮನೆ ಅವರ ಛಾಯಾಗ್ರಹಣ ಕೂಡ ಈ ಚಿತ್ರಕ್ಕಿದೆ.
ಈ ಸಿನಿಮಾದ ಕುರಿತು ನಾಯಕ ರಾಜ್ ಚರಣ್ ಮಾತನಾಡಿ, ಸಿದ್ಧಾಂತ್ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದು, ಅಮೆರಿಕಾದ ಕಂಪನಿಯೊಂದರಲ್ಲಿ ಸಸ್ಯ ವಿಜ್ಞಾನಿಯಾಗಿರುತ್ತೇನೆ. ನನ್ನಲ್ಲಿರುವ ಒಂದು ವಿಶೇಷ ಫೋಟೋಗ್ರಫಿಕ್ ಮೆಮೋರಿಯಿಂದ ಅಲ್ಲಿ ನಡೆದ ಕೊಲೆಯೊಂದರ ಮೂಲವನ್ನು ಹುಡುಕುತ್ತಾ ಹೊರಟಾಗ ನೂರಾರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಯು.ಎಸ್.ನಲ್ಲಿ ಶೂಟ್ ಮಾಡುವಾಗ ಸ್ವಲ್ಪ ತೊಂದರೆಯಾದರೂ ಅಲ್ಲಿನ ಕನ್ನಡಿಗರು ತುಂಬಾ ಸಹಾಯ ಮಾಡಿದರು. ನಮಗೆ ಮಳೆ ತುಂಬಾ ಅನುಕೂಲ ಮಾಡಿಕೊಟ್ಟಿತು ಎಂದು ಹೇಳಿದರು. ನಾಯಕಿ ಅಖಿಲಾ ಪ್ರಕಾಶ್ ಮಾತನಾಡಿ, ಗೌರಿ ಎಂಬ ಫ್ಯಾಷನ್ ಡಿಸೈನರ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಯು.ಎಸ್.ನಲ್ಲಿದ್ದರೂ ನಮ್ಮ ಸಂಪ್ರದಾಯ ಮರೆತಿರುವುದಿಲ್ಲ. ಹಾಡುಗಳನ್ನು ಮಲೇಷಿಯಾ ಹಾಗೂ ಕೂರ್ಗ್ನಲ್ಲಿ ಶೂಟ್ ಮಾಡಿz್ದÉೀವೆ. ನಾವು ಮೂವರು ನಾಯಕಿಯರಿದ್ದು ಅದರಲ್ಲಿ ರತ್ನಮಂಜರಿ ಯಾರು ಅಂತ ನಮಗೂ ಗೊತ್ತಿಲ್ಲ. ಚಿತ್ರ ಬಂದ ಮೇಲಷ್ಟೇ ಅದು ಗೊತ್ತಾಗಲಿದೆ ಎಂದು ಹೇಳಿಕೊಂಡರು. ಮತ್ತೊಬ್ಬ ನಾಯಕಿ ಪಲ್ಲವಿರಾಜು ಮಾತನಾಡಿ, ಮನೆಕೆಲಸ ಮಾಡುವ ಹುಡುಗಿ ಪಾತ್ರ ನನ್ನದು. ಸ್ವಲ್ಪ ತಲೆಹರಟೆ ಪಾತ್ರ ಎಂದು ಹೇಳಿದರು.
ಇಷ್ಟೆಲ್ಲಾ ವಿಶೇಷತೆಗಳಿರುವ ಈ ಸಿನಿಮಾ ಇದೇ ತಿಂಗಳ 17ರಂದು ಎಲ್ಲೆಡೆ ತೆರೆಗೆ ಬರುತ್ತಿದೆ. ಈ ಸಿನಿಮಾದ ಮೂಲಕ ಪ್ರಸಿದ್ಧ್ ಎನ್ನುವ ಕ್ರಿಯಾಶೀಲ ನಿರ್ದೇಶಕರೂ, ರಾಜ್ ಚರಣ್ ಎಂಬ ಪಕ್ಕಾ ಕಮರ್ಷಿಯಲ್ ಹೀರೋ ಮತ್ತು ಮೂವರು ನಾಯಕಿಯರು ದೊಡ್ಡ ಮಟ್ಟದಲ್ಲಿ ಹೆಸರು ಮಾಡೋದು ಗ್ಯಾರೆಂಟಿ ಎನ್ನುತ್ತಿದೆ ಗಾಂಧೀನಗರದ ಮೂಲ.